Publish Date: Sat, 25 Dec 2021 (17:40 IST)
Updated Date: Sat, 25 Dec 2021 (18:43 IST)
ಕರ್ನಾಟಕ ಬಂದ್ಗೆ ಚಲನಚಿತ್ರ ವಾಣಿಜ್ಯ ಮಂಡಳಿ ನೈತಿಕ ಬೆಂಬಲ ನೀಡುತ್ತಿಲ್ಲ ಎಂದು ಕನ್ನಡ ಸಂಘಟನೆಗಳು ಹೇಳಿದೆ. ಕನ್ನಡ ಪರ ಹೋರಾಟಕ್ಕೆ ಕೈಜೋಡಿಸದೇ ಇದ್ದರೆ ನಟರ ಮನೆಗಳ ಮುಂದೆಯೇ ಪ್ರತಿಭಟನೆ ಮಾಡುತ್ತೇವೆ ಎಂದು ಬೆಂಗಳೂರಿನಲ್ಲಿ ಕನ್ನಡ ಸೇನೆ ರಾಜ್ಯಾಧ್ಯಕ್ಷ ಕುಮಾರ್ ಎಚ್ಚರಿಕೆ ನೀಡಿದರು.ಡಿ.31ರ ಕರ್ನಾಟಕ ಬಂದ್ ಗೆ ನಮಗೆ ನೈತಿಕ ಬೆಂಬಲ ಬೇಡ, ಬಾಹ್ಯ ಬೆಂಬಲ ನೀಡಿ. ಕೊರೊನಾ ಬಂದಾಗ ತಿಂಗಳುಗಳ ಗಟ್ಟಲೆ ಎಲ್ಲವನ್ನು ಬಂದ್ ಮಾಡಿದ್ದೀರಾ. ಈಗ ಒಂದು ದಿನ ನಡೆಯುವ ಬಂದ್ ನಿಂದ ಆಗುವ ನಷ್ಟದ ಬಗ್ಗೆ ಮಾತನಾಡುತ್ತಿದ್ದೀರಾ. ಚಿತ್ರರಂಗ ಕ್ಕಾಗಿ ಬಂದ್ ಮುಂಚಿತವಾಗಿ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದರು.