Select Your Language

Notifications

webdunia
webdunia
webdunia
webdunia

ಕಾಂಚಿಪುರ್ ಇದು ನಮ್ಮ ನೆರೆಯ ರಾಜ್ಯದ ಅತ್ಯಂತ ಹಳೆಯ ನಗರ

ಕಾಂಚಿಪುರ್ ಇದು ನಮ್ಮ ನೆರೆಯ ರಾಜ್ಯದ ಅತ್ಯಂತ ಹಳೆಯ ನಗರ
bangalore , ಗುರುವಾರ, 30 ಸೆಪ್ಟಂಬರ್ 2021 (20:01 IST)
ಈ ನಗರವೂ ಕೇವಲ ಬರೀ ಸೀರೆಗಳಿಗೆ ಮಾತ್ರ ಹೆಸರುವಾಸಿಯಾಗಿಲ್ಲ, ಈ ನಗರದಲ್ಲಿ ಅಡಿಅಡಿಗೂ ದೇವಾಲಯಗಳು ಕಂಡು ಬರುವುದರಿಂದ ಸಾವಿರನಗರದ ದೇವಾಲಯ ಎಂದೇ ಖ್ಯಾತಿಯನ್ನೆ ಪಡೆದಿದೆ. ಅಲ್ಲದೇ ಹಿಂದೂಗಳು ಜೀವಿತಾವಧಿಯಲ್ಲಿ ನೋಡಬೇಕಾದ ಸ್ಥಳಗಳಲ್ಲಿ ಕಾಂಚಿಪುರಂ ಕೂಡ ಒಂದಾಗಿದೆ. ಬನ್ನಿ ವೀಕ್ಷಕರೇ ಕಂಚಿಯಲ್ಲಿರುವ ಕಾಮಾಕ್ಷೀದೇವಿಯ ಬಗ್ಗೆ ತಿಳಿಯೋಣ
 
ಹಲವಾರು ಕುತೂಹಲಕಾರಿ ಮಾಹಿತಿಯನ್ನ ಒಂದ್ದಾಗಿ ತಿಳಿಯುತ್ತಾ ಹೋಗೊಣ..
ಮೊದಲು ಕಾಮಕ್ಷಿ ಎಂಬ ಪದದ ಅರ್ಥ ತಿಳಿಯೋಣಾ..  ಸಂಸ್ಕೃತದಲ್ಲಿ ’ಕಾ’ ಎಂದರೇ ವಿದ್ಯಾಧರೆ ಸರಸ್ವತಿ , ’ಮಾ’ ಎಂದರೇ ಮಹಾಲಕ್ಷ್ಮೀ, ಹಾಗೂ ’ಕ್ಷೀ; ಎಂದರೇ ಕಣ್ಣು ಎಂದು ಆಗುತ್ತದೆ, ಅದ್ದರಿಂದ ಕಾಮಾಕ್ಷಿ ದೇವಿ ಸರಸ್ವತಿ ಮತ್ತು ಮಹಾಲಕ್ಷ್ಮೀಯನ್ನ ತನ್ನ ಕಣ್ಣುಗಳಾಗಿ ಒಂದ್ದಿದಾಳೆ ಎಂದು ಹೇಳಲಾಗುತ್ತದೆ, ಆದಿ ಪಾರ ಶಕ್ತಿ ಲಾಲಿತತ್ರೀಪುರ ಸುಂದರಿಯ ಮತ್ತೊಂದು ರೂಪವೇ ಈ ಕಾಮಾಕ್ಷಿ ಎಂದೂ ಹೇಳಲಾಗುತ್ತದೆ,  ಕಾಮಾಕ್ಷಿಯ ಇನ್ನೊಂದು ಅರ್ಥವೇ ಪ್ರೀತಿ ತುಂಬಿದ ಕಣ್ಣುಗಳು ಉಳ್ಳ ತಾಯಿ, ಈ ತಾಯಿಯೂ ಭಕ್ತರ ಇಷ್ಟಾರ್ಥಗಳನ್ನ ತನ್ನ ಕಣ್ಣುಗಳ ಮೂಲಕವೇ ನೇರವೇರಿಸುವ ತಾಯಿ ಆಗಿದ್ದಾಳೆ. ಈ ತಾಯಿಯ ಕಣ್ಣುಗಳಲ್ಲಿ ಎಂತವರನ್ನು ಮಂತ್ರ ಮುಗ್ಧಗೊಳಿಸುವ ಶಕ್ತಿ ಅಡಗಿದೆ.ಕಂಚಿ ಕಾಮಾಕ್ಷಿ ದೇವಾಲಯಾವನ್ನ ಕಂಚಿಕಾಮಕೋಟೆ ಎಂದು ಸಹ ಕರೆಯಲಾಗುತ್ತದೆ.  ಇಲ್ಲಿರುವ ಕಾಮಾಕ್ಷಿದೇವಿಯಾ ಮೂರ್ತಿ ಸ್ವಯಂಭುವಾಗಿದೆ. ಕಂಚಿಕಾಮಾಕ್ಷಿ ದೇವಿಯು ಭಾರತದಲ್ಲಿರುವ 18 ಶಕ್ತಿಪೀಠದಲ್ಲಿ ಒಂದಾಗಿದೆ, ದಕ್ಷ ಮಹಾರಾಜನ ಮಗಳದ ದಾಕ್ಷಯೀಣಿಯೂ  ತನ್ನ ಪತಿ ಪರಶೀವನಿಗೆ ತನ್ನ ತಂದೆ ದಕ್ಷನೂ ಮಾಡಿದ ಅವಮಾನದಿಂದ ನೊಂದು ದಕ್ಷಕುಂಡ ಯಾಗದಲ್ಲಿ ಜಿಗಿದು ತನ್ನ ಪ್ರಾಣ ತ್ಯಾಗಮಾಡುತ್ತಾಲೆ, ದಾಕ್ಷಯೀಣಿಯ ಪ್ರಾಣತ್ಯಾಗದಿಂದ ನೊಂದ ಪರಶೀವನೂ ಆಕೆಯ ದೇಹವನ್ನು ಕೈಯಲ್ಲಿ ಹಿಡಿದು ಪ್ರಳಯ ತಾಂಡವನ್ನು ಆಡತೋಡುಗುತ್ತಾನೆ. ಈ ಸಂದರ್ಭದಲ್ಲಿ ಮೂರು ಲೋಕದಲ್ಲಿ ಉಂಟಾಗಬಹುದಾದಂತಹ ಹಾನಿಯನ್ನ ತಡೆಯಲು ಮಹಾವಿಷ್ಣುವೂ ತನ್ನ ಸುದರ್ಶನ ಚಕ್ರದಿಂದ ದಾಕ್ಷಯಿಣಿ ದೇಹವನ್ನ ತುಂಡು ತುಂಡಾಗಿ ಮಾಡುತ್ತಾನೆ, ಆಕೆಯ ದೇಹದ ವಿವಿಧ ಭಾಗಗಳು ಭಾರತದ ವಿವಿದೆಡೆ ಮತ್ತು ಶ್ರೀಲಾಂಕದಲ್ಲಿ ಸೇರಿ  18 ಪ್ರದೇಶದಲ್ಲಿ ಬೀಳುತ್ತಾವೆ. ಈ ಪ್ರದೇಶಗಳನ್ನ ಅಷ್ಟಾದ ಶಕ್ತಿ ಪೀಠಗಳು ಎಂದು ಕರೆಯಲಾಗುತ್ತಾದೆ. ಕಂಚಿ ಕಾಮಾಕ್ಷಿ ದೇವಾಲಯವೂ ಅಷ್ಟಾದ ಶಕ್ತಿ ಪೀಠಗಳಲ್ಲಿ ಒಂದಾಗಿದ್ದು  , ಈ ಪ್ರದೇಶದಲ್ಲಿ ಸತಿ ಅಥವಾ ದಾಕ್ಷಯಿಣಿಯ ನಾಬಿಯ ಭಾಗ ಬಿದ್ದಿತ್ತು ಎನ್ನಲಾಗುತ್ತಾದೆ,

Share this Story:

Follow Webdunia kannada

ಮುಂದಿನ ಸುದ್ದಿ

ನಾಳೆಯಿಂದ ರಾಜ್ಯದಲ್ಲಿ ಅನ್ ಲಾಕ್ 4.0 ಜಾರಿ