Select Your Language

Notifications

webdunia
webdunia
webdunia
webdunia

ಬಿಬಿಎಂಪಿ ಬೀಗ ಜಡಿಯುತ್ತಿದ್ದಂತೆ ಅಲರ್ಟ್ ಆದ ಮಂತ್ರಿ ಮಾಲ್: 5 ಕೋಟಿ ರೂ. ಚೆಕ್ ವಿತರಣೆ

ಬಿಬಿಎಂಪಿ ಬೀಗ ಜಡಿಯುತ್ತಿದ್ದಂತೆ ಅಲರ್ಟ್ ಆದ ಮಂತ್ರಿ ಮಾಲ್: 5 ಕೋಟಿ ರೂ. ಚೆಕ್ ವಿತರಣೆ
ಬೆಂಗಳೂರು , ಗುರುವಾರ, 30 ಸೆಪ್ಟಂಬರ್ 2021 (13:16 IST)
ಬೆಂಗಳೂರು : ಬಾಕಿ ಉಳಿಸಿಕೊಂಡಿರುವ ತೆರಿಗೆ ಕಟ್ಟುವಂತೆ ಸಾಕಷ್ಟು ನೊಟಿಸ್ ಕಳುಹಿಸಿದರೂ ಕ್ಯಾರೆ ಎನ್ನದ ಮಂತ್ರಿ ಮಾಲ್ಗೆ ಬಿಬಿಎಂಪಿ ಅಧಿಕಾರಿಗಳು ಗುರುವಾರ (ಸೆ.30) ಬೀಗ ಜಡಿಯುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಮಂತ್ರಿ ಮಾಲ್ ಆಡಳಿತ ಮಂಡಳಿ ಸ್ಥಳದಲ್ಲಿ ಬಿಬಿಎಂಪಿಗೆ 5 ಕೋಟಿ ರೂ. ಚೆಕ್ ನೀಡಿದೆ.

ಅಭಿಷೇಕ್ ಡೆವಲಪರ್ಸ್ ಹೆಸರಿನಲ್ಲಿ ಬಿಬಿಎಂಪಿಗೆ ಮಂತ್ರಿ ಮಾಲ್ ತೆರಿಗೆ ಪಾವತಿ ಮಾಡುತ್ತಿದೆ. ಆದರೆ, 2017ರ ಬಳಿಕ ಇದೂವರೆಗೂ ಮಂತ್ರಿ ಮಾಲ್ ಆಸ್ತಿ ತೆರಿಗೆ ಕಟ್ಟಿಲ್ಲ. ಬಡ್ಡಿ ಸೇರಿದಂತೆ ಬರೋಬ್ಬರಿ 37 ಕೋಟಿ ರೂಪಾಯಿ ತೆರಿಗೆಯನ್ನು ಬಾಕಿ ಉಳಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ.
ಬಿಬಿಎಂಪಿ ಪಶ್ಚಿಮ ವಲಯದಲ್ಲಿ ಅತೀ ದೊಡ್ಡ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರ ಪಟ್ಟಿಯಲ್ಲಿ ಮಂತ್ರಿ ಮಾಲ್ ಮೊದಲ ಸ್ಥಾನದಲ್ಲಿದೆ. ತೆರಿಗೆ ಕಟ್ಟುವುದಾಗಿ ಮುಚ್ಚಳಿಕೆ ಬರೆದುಕೊಟ್ಟಿದ್ದ ಮಂತ್ರಿ ಮಾಲ್ ಮತ್ತೆ ತೆರಿಗೆ ಕಟ್ಟದೇ ವಂಚಿಸಿತ್ತು. ಹೀಗಾಗಿ ಇಂದು ಮಂತ್ರಿ ಮಾಲ್ಗೆ ಬಿಬಿಎಂಪಿ ಅಧಿಕಾರಿಗಳು ಬೀಗ ಜಡಿದಿದ್ದರು. ಈ ಹಿಂದೆಯೂ ಒಮ್ಮೆ ಬೀಗ ಜಡಿಯಲಾಗಿತ್ತು.
ಮಲ್ಲೇಶ್ವರಕ್ಕೆ ಸ್ವಾಗತ ಕೋರುವಂತೆ ಸಂಪಿಗೆ ರಸ್ತೆಯ ಆರಂಭದಲ್ಲೇ ಮಂತ್ರಿ ಮಾಲ್ ಇದೆ. ಇದೀಗ ಬೀಗ ಜಡಿದಿರುವ ಕಾರಣ ಶಾಪಿಂಗ್ಗೆ ಬಂದವರು ನಿರಾಶೆಯಿಂದ ವಾಪಸ್ ಹೋಗುವಂತಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಕೇಜ್ರಿವಾಲ್ ಸಲಹೆ ನಮಗೆ ಅಗತ್ಯವಿಲ್ಲ: ಪಂಜಾಬ್ ಸಚಿವ ಕಿಡಿ