Publish Date: Thu, 19 Jan 2023 (14:09 IST)
Updated Date: Thu, 19 Jan 2023 (13:11 IST)
ಮಂಡ್ಯ : ಇಷ್ಟು ದಿನಗಳ ಕಾಲ ಮಾತಿನ ಮೂಲಕ ಜೆಡಿಎಸ್ನಲ್ಲಿ ಬಂಡಾಯ ಸೂಚಿಸುತ್ತಿದ್ದ ಕೆ.ಆರ್. ಪೇಟೆ ನಾಯಕರು, ಇದೀಗ ಬಂಡಾಯ ಸಭೆ ನಡೆಸುವ ಮೂಲಕ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ನಿರ್ಧಾರದ ವಿರುದ್ಧ ಬಹಿರಂಗವಾಗಿ ಬಂಡಾಯದ ಬಾವುಟ ಹಾರಿಸಿದ್ದಾರೆ.
ಇಷ್ಟು ವರ್ಷಗಳ ಕಾಲ ಕೊನೆಯ ಹಂತದಲ್ಲಿ ಚುನಾವಣೆಗೆ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಘೋಷಣೆ ಮಾಡುತ್ತಿದ್ದ ಕುಮಾರಸ್ವಾಮಿ ಈ ಬಾರಿ ಚುನಾವಣೆಗೆ ನಾಲ್ಕೈದು ತಿಂಗಳು ಬಾಕಿ ಇರುವಾಗಲೇ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುವ ಮೂಲಕ,
ಮುಂಬರುವ ವಿಧಾನಸಭಾ ಚುನಾವಣೆಯನ್ನು ಡಿಫರೆಂಟ್ ಸ್ಟ್ರ್ಯಾಟಜಿ ಮೂಲಕ ಎದುರಿಸಲು ಮುಂದಾಗಿದ್ರು. ಅದ್ರಲ್ಲೂ ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಘೋಷಣೆ ಮಾಡಿ ಕೊನೆಯ ಹಂತದಲ್ಲಿ ಅಭ್ಯರ್ಥಿ ಆಯ್ಕೆಯನ್ನು ಮಾಡಲಾಗುತ್ತಿತ್ತು.
ಆದ್ರೆ ಈ ಬಾರಿ ಬಹುಬೇಗನೇ ಕುಮಾರಸ್ವಾಮಿ ತಮ್ಮ ಆಪ್ತರಾದ ಹೆಚ್.ಡಿ.ಮಂಜು ಅವರಿಗೆ ಟಿಕೆಟ್ ಘೋಷಣೆ ಮಾಡಿದ್ದಾರೆ.