Select Your Language

Notifications

webdunia
webdunia
webdunia
webdunia

ಜೆಡಿಎಸ್ ಮುಖಂಡರು ಕಾಂಗ್ರೆಸ್ ಗೆ ಸೇರ್ಪಡೆ

JDS leaders join Congress
bangalore , ಸೋಮವಾರ, 9 ಜನವರಿ 2023 (20:21 IST)
ಇಂದು ಜೆಡಿಎಸ್ ಪಕ್ಷವನ್ನು ತೊರೆದು ರಾಮನಗರ ಮತ್ತು ಮಂಡ್ಯ ಜಿಲ್ಲೆ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆದ್ರು . ನಗರದ ಕೆಪಿಸಿಸಿ ಕಚೇರಿಯಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಆಯೋಜನೆ ಮಾಡಲಾಗಿತ್ತು. ಕನಕಪುರದ ಜೆಡಿಎಸ್ ಮುಖಂಡ ಡಿ.ಎಂ ವಿಶ್ವನಾಥ್ ಮತ್ತು ಮಂಡ್ಯ ಜಿಲ್ಲೆಯ ಜೆಡಿಎಸ್ ಮುಖಂಡ ರಾಧಾಕೃಷ್ಣ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆದ್ರು. ಈ ವೇಳೆ ಮಾತನಾಡಿದ ಡಿಕೆ ಶಿವಕುಮಾರ್ ಇವತ್ತು ಇಬ್ಬರು ನಾಯಕರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದೇವೆ.ಕನಕಪುರ ಕ್ಷೇತ್ರದಲ್ಲು ನನ್ನ ವಿರುದ್ದ ಸ್ಪರ್ಧೆಮಾಡಿದ್ರು ೭೦೦೦ ಅಂತರದಲ್ಲಿ ಸೋತಿದ್ದರು.  ಜನತಾದಳದಲ್ಲಿ ಸಕ್ರಿಯವಾಗಿ ಭಾಗಿ ಆಗಿದ್ರು. ಹಿಂದೆ ಅವರ ಕುಟುಂಬ ಕಾಂಗ್ರೆಸ್‌ ಪಕ್ಷಕ್ಕೆ ಆಧಾರ ಸ್ತಂಭವಾಗಿದ್ರು.ಹೆಚ್ಚಿನ ಸ್ಥಾನವನ್ನು ಅರಸಿ ಜೆಡಿಎಸ್ ಗೆ ಹೋಗಿದ್ರು .ಅಲ್ಲಿ ಅವರಿಗೆಚಯಾವುದೇ ರೀತಿ ಸ್ಥಾನ ಸಿಕ್ಕಿಲ್ಲ. ಇಂದು ವಿಶ್ವಾನಥ್ ಅವರು ನಮ್ಮ ಪಕ್ಷದ ನಿಯಮಗಳನ್ನು ಒಪ್ಪಿಕೊಂಡು ಬರ್ತಾಯಿದ್ದಾರೆ.ಕಾಂಗ್ರೆಸ್ ಪಕ್ಷದಿಂದ ಪಕ್ಷಕ್ಕೆ ತುಂಬ ಹೃದಯದಿಂದ ಸ್ವಾಗತ ಎಂದು ಇಬ್ಬರು ನಾಯಕರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡ್ರು. 

Share this Story:

Follow Webdunia kannada

ಮುಂದಿನ ಸುದ್ದಿ

ಜನವರಿ 12ಕ್ಕೆ ಹುಬ್ಬಳ್ಳಿಗೆ ಪ್ರಧಾನಿ ಮೋದಿ ಆಗಮನ - ಸಿಎಂ ಬೊಮ್ಮಾಯಿ