Select Your Language

Notifications

webdunia
webdunia
webdunia
webdunia

ಡಾ. ಅಂಬೇಡ್ಕರ್ ರಸ್ತೆಯ ಕಾಫಿ ಬೋರ್ಡ್ ಆವರಣದಲ್ಲಿರುವ ನೂತನವಾಗಿ ನವೀಕರಣೆ

Dr. Newly Renovated Coffee Board Premises Ambedkar Road
bangalore , ಸೋಮವಾರ, 9 ಜನವರಿ 2023 (18:48 IST)
ಡಾ. ಅಂಬೇಡ್ಕರ್ ರಸ್ತೆಯ ಕಾಫಿ ಬೋರ್ಡ್ ಆವರಣದಲ್ಲಿರುವ ನೂತನವಾಗಿ ನವೀಕರಿಸಲಾಗಿದೆ. ಇಂಡಿಯಾ ಕಾಫಿ ಹೌಸ್ ಅನ್ನು ಭಾರತ ಸರ್ಕಾರದ ವಾಣಿಜ್ಯ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಡಿಒಸಿ ಆದ ಶ್ರೀ ರಾಜೇಶ್ ಅಗರ್ವಾಲ್, ಐಎಎಸ್ ಅವರು ಇಂದು ಉದ್ಘಾಟಿಸಿದರು. ಸುಮಾರು 22 ಲಕ್ಷ ರೂ.ಗಳ ವೆಚ್ಚದಲ್ಲಿ ನವೀಕರಿಸಲಾಗಿರುವ ಇಂಡಿಯಾ ಕಾಫಿ ಹೌಸ್ನ ಅಲಂಕಾರ ಮತ್ತು ಒಳಾಂಗಣಗಳನ್ನು 50 ವರ್ಷಗಳಷ್ಟು ಹಳೆಯದಾದ ಕಾಫಿಹೌಸ್ನ ಪರಂಪರೆಯನ್ನು ಉಳಿಸಿಕೊಳ್ಳುವ ರೀತಿಯಲ್ಲಿ ಜೊತೆಗೆ ಇಂದಿನ ಯುವಜನರೊಂದಿಗೆ ನವೀರಾದ ಜೊತೆಗೆ ದೃಢವಾದ ಸಂಪರ್ಕವನ್ನು ಹೊಂದುವoತೆ ವಿನ್ಯಾಸಗೊಳಿಸಲಾಗಿದೆ.ಅಟಲ್ ಇನ್ಕ್ಯೂಬೇಷನ್ ಸೆಂಟರ್ನಿoದ ಪೋಷಣೆ ಪಡೆದಿರುವ ಮಿಟ್ಟಿ ಕೆಫೆ ಎಂಬ ದಿವ್ಯಾಂಗ ಸಿಬ್ಬಂದಿ ನಡೆಸುವ ಸರಣಿಗೆ ಇಂಡಿಯಾ ಕಾಫಿ ಹೌಸ್ ಅವಕಾಶವನ್ನು ಪೂರೈಸಲಿದೆ. ಇನ್ನು ಇಲ್ಲಿಗೆ ಬರುವ ಸಾರ್ವಜನಿಕರೂ ಕೂಡ  ಇಂಡಿಯಾ ಕಾಫಿ ಹೌಸ್ ಅನ್ನು ಅದರ ಪಾರಂಪರಿಕ ಸೌಂದರ್ಯ ಸ್ಪರ್ಶವನ್ನು ಹಾಡಿ ಹೊಗಳಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಪೊಲೀಸ್ ಇನ್ಸ್ಪೆಕ್ಟರ್ ಪ್ರವೀಣ್ ಗೆ ಉರುಳಾಗುವ ಸಾಧ್ಯತೆ..!