Publish Date: Mon, 09 Jan 2023 (09:01 IST)
Updated Date: Mon, 09 Jan 2023 (09:03 IST)
ಗುವಾಹಟಿ: ಶ್ರೀಲಂಕಾ ವಿರುದ್ಧ ಏಕದಿನ ಸರಣಿ ನಾಳೆಯಿಂದ ಆರಂಭವಾಗಲಿದ್ದು, ಗುವಾಹಟಿಯಲ್ಲಿ ಮೊದಲ ಪಂದ್ಯ ನಡೆಯಲಿದೆ. ಇದಕ್ಕೆ ಮೊದಲು ನಾಯಕ ರೋಹಿತ್ ಶರ್ಮಾ ಫಿಟ್ನೆಸ್ ಪರೀಕ್ಷೆಗೊಳಗಾಗಬೇಕಿದೆ.
ರೋಹಿತ್ ಬಾಂಗ್ಲಾದೇಶ ಸರಣಿಯಲ್ಲಿ ಹೆಬ್ಬರಳಿನ ಗಾಯಕ್ಕೊಳಗಾಗಿದ್ದರು. ಇದಾದ ಬಳಿಕ ಟೆಸ್ಟ್ ಸರಣಿಯಲ್ಲಿ ಆಡಿರಲಿಲ್ಲ. ಲಂಕಾ ಟಿ20 ಸರಣಿಯಿಂದ ಅವರಿಗೆ ವಿಶ್ರಾಂತಿ ನೀಡಲಾಗಿತ್ತು. ಇದೀಗ ಏಕದಿನಕ್ಕೆ ಸರಣಿಗೆ ವಾಪಸಾಗುತ್ತಿದ್ದಾರೆ.
ಆದರೆ ನಿಯಮದ ಪ್ರಕಾರ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಮರಳುವ ಮುನ್ನ ರೋಹಿತ್ ಫಿಟ್ನೆಸ್ ಪರೀಕ್ಷೆಗೊಳಗಾಗಬೇಕಿದೆ. ಹೀಗಾಗಿ ಗುವಾಹಟಿ ಏಕದಿನಕ್ಕೆ ಮುನ್ನ ರೋಹಿತ್ ಟೆಸ್ಟ್ ಪಾಸು ಮಾಡಬೇಕಿದೆ.