Select Your Language

Notifications

webdunia
webdunia
webdunia
webdunia

ಪಾರ್ಕಿಂಗ್ ವಿಚಾರವಾಗಿ ಕೇಕ್ ಶಾಪ್ ಮ್ಯಾನೆಜರ್ ಗೆ ಹಲ್ಲೆ

ಪಾರ್ಕಿಂಗ್ ವಿಚಾರವಾಗಿ ಕೇಕ್ ಶಾಪ್ ಮ್ಯಾನೆಜರ್ ಗೆ ಹಲ್ಲೆ
ಪಾರ್ಕಿಂಗ್ ವಿಚಾರವಾಗಿ ಕೇಕ್ ಶಾಪ್ ಮ್ಯಾನೆಜರ್ ಗೆ ಹಲ್ಲೆನಡೆಸಿರೋ ಘಟನೆ ಇಂದಿರಾ ನಗರದ ಸ್ಮೂರ್ ಕೇಕ್ ಶಾಪ್ ನಲ್ಲಿ ನಡೆದಿದೆ.ಶಾಪ್ ಮುಂದೆ ಪಾರ್ಕಿಂಗ್ ಮಾಡಿದ್ದನ್ನ ಪ್ರಶ್ನಿಸಿದ್ದಕ್ಜೆ ಮ್ಯಾನೇಜರ್  ಶೈಲೇಶ್ ಹಲ್ಲೆಮಾಡಲಾಗಿದೆ. ಸ್ಮೂರ್ ಹೋಟೆಲ್ ಮೇಲೆ ಹೌಸ್ ಆಫ್ ಕಾಮರ್ಸ್ ಎಂಬ ಬಾರ್ ಇದ್ದು,ಬಾರ್ ಗೆ ಕುಡಿಯಲು ಬಂದಿದ್ದ ಐದಾರು ಮಂದಿ ಹೋಟೆಲ್ ಮುಂದೆ ಕಾರ್ ಪಾರ್ಕ್ ಮಾಡಿದ್ರು.ಇದನ್ನ ಪ್ರಶ್ನಿಸಿದ್ದ ಶೈಲೇಶ್ ಕಾರ್ ಪಾರ್ಕ್ ಮಾಡದಂತೆ ಹೇಳಿದ್ರು.ಇದಕ್ಕೆ ರೊಚ್ಚಿಗೆದ್ದ ಪುಂಡರ ಗುಂಪು ಶೈಲೇಶ್ ಮೇಲೆ ಹಲ್ಲೆ ಮಾಡಿದ್ದಾರೆ. ನಿನ್ನೆ ರಾತ್ರಿ  8.30 ರ ಸುಮಾರಿಗೆ ನಡೆದಿರುವ ಘಟನೆ ನಡೆದಿದ್ದು,ಹಲ್ಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ನಂತರ ಆಸ್ಪತ್ರೆಗೆ ತೆರಳಿ ಮೆಡಿಕಲ್ ಮಾಡಿಸಿ ಠಾಣೆಗೆ ಬಂದ್ರು ಸಹ ದೂರು ದಾಖಲಿಸಿಕೊಳ್ಳದೆ ಸತಾಯಿಸಿದ್ರು ಯಾವಾಗ ಮಾಧ್ಯಮದಲ್ಲಿ ಸುದ್ದಿ ಬಂತೋ ಎಚ್ಚೆತ ಪೊಲೀಸರು ದೂರು‌ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಇನ್ನೂ ಹಲ್ಲೆ ಮಾಡಿದ್ದ ಆರೋಪಿಗಳ ಬೈಕ್ ಕೂಡ ಪತ್ತೆಯಾಗಿದ್ದು ಆರೋಪಿಗಳ ಬಂಧನಕ್ಕೆ ಜೀವನ್ ಭೀಮಾನಗರ ಪೊಲೀಸರು ತಲಾಶ್ ಶುರುಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದು ನಿಜ ಕನಸುಗಳ ಪುಸ್ತಕ ಕಾರ್ಯಕ್ರಮ-ರೊಚ್ಚಿಗೆದ್ದ ಕಾಂಗ್ರೆಸ್ ಕಾರ್ಯಕರ್ತರಿಂದ ಧರಣಿ