Select Your Language

Notifications

webdunia
webdunia
webdunia
webdunia

ಜಿಂದಾಲ್ ಪ್ರಕರಣ: ಮೈತ್ರಿ ಸರಕಾರದ ವಿರುದ್ಧ ಕನ್ನಡಪರ ಸಂಘಟನೆಗಳು ಗರಂ

ಜಿಂದಾಲ್ ಪ್ರಕರಣ: ಮೈತ್ರಿ ಸರಕಾರದ ವಿರುದ್ಧ ಕನ್ನಡಪರ ಸಂಘಟನೆಗಳು ಗರಂ
ಚಾಮರಾಜನಗರ , ಮಂಗಳವಾರ, 18 ಜೂನ್ 2019 (16:31 IST)
ಜಿಂದಾಲ್ ಗೆ ಭೂಮಿ ನೀಡುವ ಮೈತ್ರಿ ಸರ್ಕಾರದ ವಿರುದ್ಧ ಪ್ರತಿಭಟನೆಗಳು ಮುಂದುವರಿದಿವೆ.

ಜಿಂದಾಲ್ ಗೆ ಭೂಮಿ ನೀಡಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಚಾಮರಾಜನಗರದಲ್ಲಿ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು.

ನಗರದ ಭುವನೇಶ್ವರಿ ವೃತ್ತದಲ್ಲಿ ಪ್ರತಿಭಟಿಸಿದ ಕನ್ನಡ ಸಂಘಟನೆಗಳ ಕಾರ್ಯಕರ್ತರು, ರೈತರು ಒಂದು ಎಕರೆ ಭೂಮಿ ಖರೀದಿಸಲು ಕಷ್ಟವಿದೆ. ರೈತರಿಗೆ ಸಾಗುವಳಿ ಭೂಮಿ ನೀಡುತ್ತಿಲ್ಲ. ಒಂದು ಎಕರೆ ಭೂಮಿ ಖರೀದಿಸಿ ನೋಂದಣಿ ಮಾಡಿಸಲು ನೂರೆಂಟು ದಾಖಲೆಗಳನ್ನ ಕೇಳಿ ಅಲೆದಾಡಿಸಲಾಗುತ್ತೆ.

ಆದ್ರೆ ಜಿಂದಾಲ್ ಗೆ ಸರ್ಕಾರವೇ ಮೂರೂವರೆ ಸಾವಿರ ಎಕರೆ ಭೂಮಿ ನೀಡಲು ಮುಂದಾಗಿದೆ. ಎಕರೆಗೆ ಒಂದು ಲಕ್ಷದ ಇಪ್ಪತ್ತು ಸಾವಿರದಂತೆ ನೀಡಿರುವುದು ಅನುಮಾನಕ್ಕೆಡೆ ಮಾಡಿಕೊಟ್ಟಿದೆ. ಇದನ್ನು ಎಲ್ಲರೂ ಖಂಡಿಸಲೇಬೇಕು. ರಾಜ್ಯ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿದ್ರು.



Share this Story:

Follow Webdunia kannada

ಮುಂದಿನ ಸುದ್ದಿ

ಚಾನೆಲ್ ವರದಿಗಾರನ ತಲೆಗೆ ಕೊಡಲಿ ಏಟು ಹಾಕಿದ ಕಿರಾತಕ