ಮೈತ್ರಿ ಸರಕಾರಕ್ಕೆ ಎಚ್ಚರಿಕೆ ನೀಡಿದ ಕಾಂಗ್ರೆಸ್ ಶಾಸಕ

ಭಾನುವಾರ, 16 ಜೂನ್ 2019 (19:58 IST)
ಜಿಂದಾಲ್ ಗೆ ಯಾವುದೇ ಕಾರಣಕ್ಕೂ ಭೂಮಿ ಪರಭಾರೆ ಮಾಡಬಾರದು ಅಂತ ಮತ್ತೊಬ್ಬ ಕಾಂಗ್ರೆಸ್ ಶಾಸಕ ಸರಕಾರದ ವಿರುದ್ಧ ತಿರುಗಿಬಿದ್ದಿದ್ದಾರೆ.

ಜಿಂದಾಲ್ ಗೆ ಭೂಮಿ ಪರಭಾರೆ ಮಾಡಬಾರದು ಅಂತ ಕಾಂಗ್ರೆಸ್ ಹಿರಿಯ ಶಾಸಕ ಹೆಚ್.ಕೆ.ಪಾಟೀಲ್ ಆಕ್ಷೇಪ ವ್ಯಕ್ತಪಡಿಸಿದ್ದರು. ಇನ್ನು ಬಿಜೆಪಿ ಜಿಂದಾಲ್ ಪ್ರಕರಣ ವಿರೋಧಿಸಿ ಧರಣಿ ನಡೆಸಿದೆ. ಈ ನಡುವೆ ಸಂಪುಟ ಉಪ ಸಮಿತಿ ಪುನರ್ ಪರಿಶೀಲನೆಗೆ ತೀರ್ಮಾನಿಸಿದೆ. ಈಗ ಆಡಳಿತ ಪಕ್ಷದ ಶಾಸಕರೇ ಜಿಂದಾಲ್ ಗೆ ಭೂಮಿ ನೀಡೋದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಶಾಸಕ ಆನಂದ್ ಸಿಂಗ್ ಮಾತನಾಡಿದ್ದು, ಜಿಂದಾಲ್ ಗೆ ಸರಕಾರ ಭೂಮಿ ನೀಡಬಾರದು. ಜಿಂದಾಲ್ ನಲ್ಲಿ ಸ್ಥಳೀಯರನ್ನು ಗುಲಾಮರನ್ನಾಗಿ ದುಡಿಸಿಕೊಳ್ಳಲಾಗುತ್ತದೆ. ಕಂಪನಿಯಿಂದ ಲೋಕಲ್ ಜನರಿಗೆ ಉಪಯೋಗವಿಲ್ಲ ಎಂದಿದ್ದಾರೆ.
ಒಂದು ವೇಳೆ ಸರಕಾರ ಜಿಂದಾಲ್ ಗೆ ಭೂಮಿ ನೀಡಿದ್ದೇ ಆದಲ್ಲಿ ಜಿಂದಾಲ್ ನಿಂದ ಬೆಂಗಳೂರುವರೆಗೆ ಪಾದಯಾತ್ರೆ ನಡೆಸೋದಾಗಿ ಎಚ್ಚರಿಕೆ ನೀಡಿದ್ದಾರೆ.


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಸಂಸತ್ ಅಧಿವೇಶನಕ್ಕೆ ಕ್ಷಣಗಣನೆ: ವಿಪಕ್ಷಗಳು ನಿಶ್ಯಸ್ತ್ರ