Select Your Language

Notifications

webdunia
webdunia
webdunia
webdunia

ಜಿಂದಾಲ್ ಗೆ ಭೂಮಿ: ಕ್ಯಾಬಿನೆಟ್ ನಲ್ಲಿ ಮರು ಪರಿಶೀಲನೆ

ಜಿಂದಾಲ್ ಗೆ ಭೂಮಿ: ಕ್ಯಾಬಿನೆಟ್ ನಲ್ಲಿ ಮರು ಪರಿಶೀಲನೆ
ಬೆಂಗಳೂರು , ಶುಕ್ರವಾರ, 14 ಜೂನ್ 2019 (15:02 IST)
ಜಿಂದಾಲ್ ಗೆ ಜಮೀನು ಪರಭಾರೆ ವಿಚಾರವಾಗಿ ಇಂದಿನ ಕ್ಯಾಬಿನೆಟ್ ನಲ್ಲಿ ಮರು ಪರಿಶೀಲನೆ ಮಾಡ್ತೇವೆ. ಹೀಗಂತ ಸಚಿವರು ಹೇಳಿದ್ದಾರೆ.

ರಾಜಭವನದಲ್ಲಿ ಸಚಿವ ಕೆ. ಜೆ. ಜಾರ್ಜ್ ಹೇಳಿಕೆ ನೀಡಿದ್ದು, ಜಿಂದಾಲ್ ಗೆ ಜಮೀನು ಪರಭಾರೆ ವಿಚಾರವಾಗಿ ಕ್ಯಾಬಿನೆಟ್ ನಲ್ಲಿ ಮರು ಪರಿಶೀಲನೆ ಮಾಡ್ತೇವೆ ಎಂದಿದ್ದಾರೆ. ಸಾರ್ವಜನಿಕ ವಲಯದಲ್ಲಿ ಗೊಂದಲ ಉಂಟಾದ ಹಿನ್ನಲೆಯಲ್ಲಿ ಮರು ಪರಿಶೀಲನೆ ಮಾಡ್ತಿದ್ದೇವೆ ಎಂದರು.

ಬಿ.ಎಸ್.ಯಡಿಯೂರಪ್ಪ ಈ ಹಿಂದೆ ಡಿಸಿಎಂ ಆಗಿದ್ದ ವೇಳೆಯೇ 2000 ಎಕರೆ ನೀಡಿ ಆದೇಶ ಮಾಡಿದ್ರು. ನಾವೇನೂ ಹೊಸದಾಗಿ ಆದೇಶ ಮಾಡ್ತಿಲ್ಲ ಎಂದರು.

ಜಿಂದಾಲ್ ಗುಡ್ ಬಿಸಿನೆಸ್ ಮನ್. ಲಾಭ ಇಲ್ಲದೇ ಯಾರೂ ಬಿಜಿನೆಸ್ ಮಾಡಲ್ಲ ಎಂದರು. ಈ ಹಿಂದೆ ಸದಾನಂದಗೌಡರ ಕಾಲದಲ್ಲೇ ಒಡಂಬಡಿಕೆ ಆಗಿತ್ತು. ಲೀಸ್ ಕಂ ಸೇಲ್ ಡೀಡ್ ಮಾಡಲಾಗಿದೆ. ಯಡಿಯೂರಪ್ಪನವರ ಅವಧಿಯಲ್ಲೇ ಇದಕ್ಕೆ ಒಪ್ಪಿಗೆ ಸಿಕ್ಕಿತ್ತು. ಬಿಎಸ್ ಯಡಿಯೂರಪ್ಪರ ನಿರ್ಧಾರವನ್ನ ಆಗಲೇ ನಾನು ಸ್ವಾಗತಿಸಿದ್ದೆ. ಈಗಲೂ ನಾನು ಸ್ವಾಗತಿಸುತ್ತೇನೆ ಎಂದರು.

ಸಂಸ್ಥೆ 60 ಸಾವಿರ ಕೋಟಿ ಬಂಡವಾಳ ಹೂಡಿದೆ. 25 ಸಾವಿರ ಜನರಿಗೆ ಉದ್ಯೋಗ ಒದಗಿಸಿದೆ. ರಾಜ್ಯ ಸರ್ಕಾರಕ್ಕೆ ಹೆಚ್ಚಿನ ಆದಾಯ ಸಂಸ್ಥೆಯಿಂದ ಬರುತ್ತಿದೆ. ಹೀಗಾಗಿ ಅಂದಿನ ಒಪ್ಪಂದ ಅಂತಿಮಗೊಳಿಸಿದ್ದೇವೆ. ಆದರೂ ಸಾಕಷ್ಟು ಆರೋಪಗಳು ಕೇಳಿ ಬಂದಿವೆ. ಹೀಗಾಗಿ ಮತ್ತೆ ಕ್ಯಾಬಿನೆಟ್ ಮುಂದಿಟ್ಟಿದ್ದೇವೆ. ಸಾರ್ವಜನಿಕರಿಗೆ ಸಂಶಯಬರಬಾರದೆಂದು ಇಟ್ಟಿದ್ದೇವೆ. ಇಂದು ಕ್ಯಾಬಿನೆಟ್ ಡಿಶಿಷನ್ ತೆಗೆದುಕೊಳ್ಳಲಿದೆ ಅಂತ ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್ ಪ್ರತಿಕ್ರಿಯೆ ನೀಡಿದ್ದಾರೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಸರಕಾರಿ ಶಾಲೆಗಳಲ್ಲಿ ಆಂಗ್ಲಮಾಧ್ಯಮ ಶುರು