Publish Date: Thu, 26 Apr 2018 (18:46 IST)
Updated Date: Thu, 26 Apr 2018 (18:48 IST)
ರಾಜ್ಯದಾದ್ಯಂತ ಜೆಡಿಎಸ್ ಮತ್ತು ಬಿಎಸ್ಪಿ ಗೆ ಉತ್ತಮ ವಾತಾವರಣ ಕಂಡು ಬಂದಿದೆ. ಈ ಹಿನ್ನೆಲೆ ಯಲ್ಲಿ ಈ ಬಾರಿ ರಾಜ್ಯದಲ್ಲಿ ಜೆಡಿಎಸ್ ಮತ್ತು ಬಿಎಸ್ಪಿ ಸರ್ಕಾರ ರಚನೆ ಮಾಡುವುದರಲ್ಲಿ ಯಾವುದೇ ಅನುಮಾನ ಬೇಡ ಎಂದು ಜೆಡಿಎಸ್ ರಾಜ್ಯಾಧ್ಯಾಕ್ಷ ಎಚ್.ಡಿ. ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ಚಿತ್ರದುರ್ಗದ ಹೆಲಿಪ್ಯಾಡ್ ನಲ್ಲಿ ಮಾಧ್ಯಮದ ರೊಂದಿಗೆ ಅವರು ಮಾತನಾ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಗುರವಾಗಿ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಇದನ್ನು ನಾನು ಗಮನಿಸುತ್ತಿದ್ದೇನೆ. ನಿನ್ನೆಯಿಂದ ಅಗುತ್ತಿರುವ ಹೊಸ ಬೆಳವಣಿಗೆಯೊಂದರಲ್ಲಿ ಜೆಡಿಎಸ್ ನ ಬದಾಮಿ ಹಾಗೂ ಚಾಮುಂಡೇಶ್ವರಿ ಕ್ಷೇತ್ರಗಳಲ್ಲಿ ನಾವು ಗೆಲ್ಲುತ್ತೇವೆ ಎಂದರು. ಸಿದ್ದರಾಮಯ್ಯ ಅಧಿಕಾರವಧಿಯಲ್ಲಿ ಜೆಡಿಎಸ್ ಪಕ್ಷವನ್ನು ಮುಗಿಸಲು ಹೋಗಿದ್ದರು. ಇವರಿಗೆ 15 ರ ನಂತರ ಉತ್ತರ ನೀಡಲಿದ್ದೇವೆ ಎಂದರು.
ಬಾದಾಮಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತಿ ಲೆಕ್ಕ ಚಾರ ಮಾಡುತ್ತಿದ್ದು , ಆಯಾ ಜಾತಿಗಳ ಮತ ಸೆಳೆಯಲು ನಾಯಕರನ್ನು ಸಚಿವರನ್ನು ನಿಯೋಜಿಸಿದ್ದಾರೆ. ನಾನು ಜಾತ್ಯಾತೀತ ಎಂದು ಹೇಳುವ ಸಿದ್ದರಾಮಯ್ಯ ನಿಜವಾಗಿಯೂ ಜಾತಿವಾದಿಯಾಗಿದ್ದಾರೆ. ನಾನು ಮುಖ್ಯಮಂತ್ರಿಯಾಗುತ್ತೇನೆ ಎಂದು ಎಲ್ಲಿ ಹೇಳಿಲ್ಲ. ಅವರೇ ಹೇಳಿದ್ದಾರೆ. ನಾನು ಒಂದು ಅವಕಾಶ ಮಾಡಿಕೊಡಿ ಎಂದು ಮತದಾರರ ಮುಂದೆ ಮನವಿ ಮಾಡಿದ್ದೇನೆ. ಇಷ್ಟಕ್ಕೆ ಸಿದ್ದರಾಮಯ್ಯ ಗಾಬರಿಯಾಗಿದ್ದಾರೆ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.