Select Your Language

Notifications

webdunia
webdunia
webdunia
webdunia

ಬಿಜೆಪಿ ಅಭ್ಯರ್ಥಿ ಮೇಲೆ ಚಪ್ಪಲಿ ತೂರಿದ ಜೆಡಿಎಸ್ ಕಾರ್ಯಕರ್ತರು

ಬಿಜೆಪಿ ಅಭ್ಯರ್ಥಿ ಮೇಲೆ ಚಪ್ಪಲಿ ತೂರಿದ ಜೆಡಿಎಸ್ ಕಾರ್ಯಕರ್ತರು
ಮಂಡ್ಯ , ಮಂಗಳವಾರ, 19 ನವೆಂಬರ್ 2019 (18:25 IST)
ಬಿಜೆಪಿ ಅಭ್ಯರ್ಥಿ ಮೆರವಣಿಗೆ ಸಂದರ್ಭದಲ್ಲಿ ಜೆಡಿಎಸ್ ಕಾರ್ಯಕರ್ತರು ಚಪ್ಪಲಿ ತೂರಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಮಂಡ್ಯದ ಕೆ.ಆರ್.ಪೇಟೆಯಲ್ಲಿ ಘಟನೆ ನಡೆದಿದ್ದು, ಸ್ಥಳದಲ್ಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಪೊಲೀಸರನ್ನ ಬಿಜೆಪಿ ಅಭ್ಯರ್ಥಿ ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಬಿಜೆಪಿ ಅಭ್ಯರ್ಥಿ ಹಾಗೂ ಅವರ ಪತ್ನಿಯಿಂದ ತರಾಟೆ ನಡೆದಿದ್ದು, ಚುನಾವಣಾಧಿಕಾರಿ ಕಚೇರಿಯಲ್ಲೇ ಇದು ನಡೆದಿದೆ. 

ಮಂಡ್ಯ ಎಸ್ಪಿ ಪರಶುರಾಮ್ ಗೆ ತರಾಟೆ ಒಳಗಾದ ಅಧಿಕಾರಿಯಾಗಿದ್ದರೆ, ಸಚಿವ ಮಾಧುಸ್ವಾಮಿ, ಬಿಜೆಪಿ ಅಭ್ಯರ್ಥಿ ಕೆ.ಸಿ.ನಾರಾಯಣಗೌಡರ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದೆ.

ಹೀಗಾಗಿ ಜೆಡಿಎಸ್ ಅಭ್ಯರ್ಥಿ, ಕಾರ್ಯಕರ್ತರ ಬಳಿಗೆ ತೆರಳಲು ಯತ್ನಿಸಿದ್ದಾರೆ ನಾರಾಯಣಗೌಡ. ಆಗ ನಾರಾಯಣಗೌಡರನ್ನ ಸಮಾಧಾನಪಡಿಸಿ ಒಳಗೆ ಕರೆದೊಯ್ದರು ಪೊಲೀಸರು.

ಚಪ್ಪಲಿಯಲ್ಲಿ ಹೊಡೆಯೋಕೆ ಅವರ್ಯಾರು? ಅವರೇನು ಗೂಂಡಾಗಿರಿ ಮಾಡೋಕೆ ಬಂದಿದ್ದಾರಾ?
ನಾನೇ ಅವರನ್ನ ಕೇಳ್ತೀನಿ ಬಿಡಿ. ನಾನೂ ಆ ಪಕ್ಷದಲ್ಲಿದ್ದವನು. ನಾನು ಅಂತಹ ಕಲ್ಚರ್ ಕಲಿತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಹುಣಸೂರು ಕ್ಷೇತ್ರದ ಉಪಚುನಾವಣೆ ಹಿನ್ನಲೆ; ಬಿಜೆಪಿಯಿಂದ ಮತದಾರರಿಗೆ ಹಣ ಹಂಚಿಕೆ ಆರೋಪ