Publish Date: Fri, 08 Nov 2019 (13:18 IST)
Updated Date: Fri, 08 Nov 2019 (13:19 IST)
40 ವರ್ಷಗಳ ಮಂಡ್ಯದ ಸಂತೇಬಾಚಹಳ್ಳಿ ಜನರ ಕನಸು ನನಸಾಗಿದೆ. ಹೇಮಾವತಿ ನದಿಯಿಂದ ಏತನೀರಾವರಿ ಯೋಜನೆಯ ಮೂಲಕ ಕೆರೆಗಳನ್ನು ತುಂಬಿಸುವುದಕ್ಕೆ ಚಾಲನೆ ನೀಡಲಾಗಿದೆ.
212 ಕೋಟಿ ವೆಚ್ಚದ ಕಾಮಗಾರಿಗೆ ಅನರ್ಹ ಶಾಸಕ ನಾರಾಯಣಗೌಡ ಚಾಲನೆ ನೀಡಿದ್ರು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರ ಗುಣಗಾನ ಮಾಡಿದ ಅನರ್ಹ ಶಾಸಕ ನಾರಾಯಣಗೌಡ ತಮ್ಮ ಭಾಷಣದುದ್ದಕ್ಕೂ ಯಡಿಯೂರಪ್ಪರನ್ನು ನೆನೆದರು.
ಬರಪೀಡಿತ ಮಂಡ್ಯದ ಸಂತೇಬಾಚಹಳ್ಳಿ ಕೆರೆ ಕಟ್ಟೆಗಳಿಗೆ ಗೂಡೇಹೊಸಳ್ಳಿ ಬಳಿಯ ಹೇಮಾವತಿ ನದಿಯಿಂದ ಏತನೀರಾವರಿ ಯೋಜನೆಯ ಮೂಲಕ ನೀರು ತುಂಬಿಸುವ 40 ವರ್ಷಗಳ ಹೋರಾಟದ ಯೋಜನೆಗೆ
ಅನರ್ಹ ಶಾಸಕ ನಾರಾಯಣಗೌಡ ದಂಪತಿಗಳು ಭೂಮಿಪೂಜೆ ಮಾಡಿದ್ರು. ಭರ್ತಿಯಾಗಿರುವ ದೊಡ್ಡಕೆರೆಗೆ ಬಾಗಿನ ಸಮರ್ಪಿಸಿ ಗಂಗಾಪೂಜೆ ನೆರವೇರಿಸಿದ್ರು.