Select Your Language

Notifications

webdunia
webdunia
webdunia
webdunia

ಹೆಚ್.ಡಿ.ದೇವೇಗೌಡರಿಗೆ ಸಂಸದ ಶ್ರೀನಿವಾಸ್ ಪ್ರಸಾದ್ ಟಾಂಗ್

webdunia
ಶುಕ್ರವಾರ, 8 ನವೆಂಬರ್ 2019 (13:05 IST)
ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ್ರು ರಾಜಕೀಯ ಮಾಡಿಕೊಂಡು ಬಂದಿರೋ ವಿಚಾರ ಎಲ್ಲರಿಗೂ ತಿಳಿದೇ ಇದೆ. ಅಂತ ಹರಿಹಾಯ್ದಿರೋ ಬಿಜೆಪಿ ಸಂಸದ ಮಾಜಿ ಪ್ರಧಾನಿಗೆ ಟಾಂಗ್ ನೀಡಿದ್ದಾರೆ.

ಚಾಮರಾಜನಗರದಲ್ಲಿ ಸಂಸದ ಶ್ರೀನಿವಾಸ್ ಪ್ರಸಾದ್ ಹೇಳಿಕೆ ನೀಡಿದ್ದು, ಜೆಡಿಎಸ್ ಬಿಜೆಪಿಗೆ ಬೆಂಬಲ ವಿಚಾರದ  ಕುರಿತು ನಾನು ಪ್ರತಿಕ್ರಿಯಿಸಲ್ಲ, ಮುಂದೇ ಏನಾಗುತ್ತೋ ನನಗೆ ಗೊತ್ತಿಲ್ಲ ಎಂದಿದ್ದಾರೆ.

ರಾಜಕಾರಣ ಮಾಡೋದು ನಂಗೆ ಗೊತ್ತಿದೆ ಅಂತ ದೇವೇಗೌಡ್ರು ಹೇಳಿದ್ದಾರೆ. ದೇವೇಗೌಡರು ಇಡೀ ಇಂಡಿಯಾದಲ್ಲಿ ಅತ್ಯಂತ ಹಿರಿಯ ರಾಜಕಾರಣಿ. ಪ್ರಧಾನ ಮಂತ್ರಿಯಾಗಿ ಆಳ್ವಿಕೆ ಮಾಡಿದ್ದಾರೆ.

ಅವರಿಗೆ ಗೊತ್ತೇ ಇರಬೇಕು. ಯಾವ ತರಹ ರಾಜಕಾರಣ ಮಾಡಿದ್ದಾರೆ, ಮಾಡ್ತಿದ್ದಾರೆ ಅದೂ ಎಲ್ಲರಿಗೂ ಗೊತ್ತಿದೆ ಎಂದಿದ್ದಾರೆ.
ವಿಧಾನ ಸಭೆಯಲ್ಲಿ ಯಾವ ರೀತಿ ಇತ್ತು, ಲೋಕಸಭಾ ಚುನಾವಣಾ ಮೈತ್ರಿ ನಂತ್ರ ಏನಾಯ್ತು? ಅಂತಾ ಎಲ್ಲರಿಗೂ ಗೊತ್ತಿದೆ. ಹೀಗಂತ ದೇವೇಗೌಡ್ರ ರಾಜಕೀಯ ಅನುಭವದ ಕುರಿತು ವ್ಯಂಗ್ಯವಾಗಿ ಕಾಲೆಳೆದಿದ್ದಾರೆ ಸಂಸದ ಶ್ರೀನಿವಾಸ್ ಪ್ರಸಾದ್.
Share this Story:

Follow Webdunia Hindi

ಮುಂದಿನ ಸುದ್ದಿ

ಅಯೋಧ್ಯೆ ತೀರ್ಪು : ರಾಜ್ಯದಲ್ಲಿ ಹೈ ಅಲರ್ಟ್ ಇಲ್ಲ ಯಡಿಯೂರಪ್ಪ