ಸಾಲ ನೀಡಿ ಗೆಳೆಯನ ಹೆಂಡತಿಯ ಜತೆ ಚಕ್ಕಂದವಾಡಿದ ಪಂಚಾಯತ್ ಸದಸ್ಯ

ಶುಕ್ರವಾರ, 8 ನವೆಂಬರ್ 2019 (11:41 IST)
ಚಿತ್ರದುರ್ಗ : ಜಿಲ್ಲಾ ಪಂಚಾಯತ್ ಸದಸ್ಯನೊಬ್ಬ ಸಾಲ ಪಡೆದ ಸ್ನೇಹಿತನ ಹೆಂಡತಿಯ ಜೊತೆಗೆ ಅನೈತಿಕ ಸಂಬಂಧ ಬೆಳೆಸಿ ಆ ಸಂಸಾರವನ್ನು ಒಡೆದ ಘಟನೆ ಚಿತ್ರದುರ್ಗದ ಸಿರಿಗೆರೆಯಲ್ಲಿ ನಡೆದಿದೆ.
ಪರಮೇಶ್ವರ್ ಹಾಗೂ ಪಾರ್ವತಿ ದಂಪತಿಗೆ ಮದುವೆಯಾಗಿ 20 ವರ್ಷವಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಆದರೆ ಮನೆಕಟ್ಟಲು ಪರಮೇಶ್ವರ್ ತನ್ನ ಸ್ನೇಹಿತ ಜಿಲ್ಲಾ ಪಂಚಾಯತ್ ಸದಸ್ಯ ತಿಪ್ಪೇಸ್ವಾಮಿಯ ಬಳಿ 9ಲಕ್ಷ ಸಾಲ ಪಡೆದಿದ್ದ. ಇದನ್ನೇ ನೆಪವಾಗಿಟ್ಟುಕೊಂಡ ತಿಪ್ಪೇಸ್ವಾಮಿ ಪರಮೇಶ್ವರ ಪತ್ನಿಯ ಜೊತೆ ಅನೈತಿಕ ಸಂಬಂಧ ಬೆಳೆಸಿದ್ದ. ಈ ವಿಚಾರ ಪರಮೇಶ್ವರ್ ಗೆ ತಿಳಿದು ಸಾಲ ವಾಪಾಸ್ಸು ನೀಡಿ ಇಬ್ಬರಿಗೂ ಎಚ್ಚರಿಕೆ ನೀಡಿದ್ದರು ಕೂಡ ಅವರಿಬ್ಬರು ತಮ್ಮ ಸಂಬಂಧವನ್ನು ಮುಂದುವರಿಸಿದ್ದಾರೆ.


ಇದೀಗ ಪರಮೇಶ್ವರ್ ಪತ್ನಿ ತಿಪ್ಪೇಸ್ವಾಮಿಗಾಗಿ ತನ್ನ ಮಕ್ಕಳು ಹಾಗೂ ಗಂಡನನ್ನು ಬಿಡಲು ಸಿದ್ದಳಾಗಿದ್ದಾಳೆ. ಇದರಿಂದ ಪರಮೇಶ್ವರ್ ಹಾಗೂ ಪಾರ್ವತಿ ದಾಂಪತ್ಯ ಜೀವನ ಮುರಿದುಬಿದ್ದಿದೆ. ಇಂತಹ ಅನ್ಯಾಯ ಬೇರೆ ಯಾರಿಗೂ ಆಗಬಾರದೆಂದು ಪರಮೇಶ್ವರ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಅನರ್ಹರಿಗೆ ಬಿಗ್ ಶಾಕ್; ತೀರ್ಪು ಕಾಯ್ದಿರಿಸಿದ ಕೋರ್ಟ್