ಹುಡುಗಿಗಾಗಿ ಇಬ್ಬರು ಸ್ನೇಹಿತರ ನಡುವೆ ಗಲಾಟೆ. ಕೊನೆಗೆ ಆಗಿದ್ದೇನು?

ಸೋಮವಾರ, 4 ನವೆಂಬರ್ 2019 (07:48 IST)
ಬೆಂಗಳೂರು : ಒಬ್ಬ ಹುಡುಗಿಯ ವಿಚಾರಕ್ಕೆ ಯುವಕನೊಬ್ಬ ಕುಡಿದ ಮತ್ತಿನಲ್ಲಿ ತನ್ನ ಸ್ನೇಹಿತನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಹೆಣ್ಣೂರಿನ ಜಾನಕಿರಾಮ ಲೇಔಟ್ ನಲ್ಲಿ ನಡೆದಿದೆ.
ಮೊರೋಡೆ(29)ಕೊಲೆಯಾದ ಯುವಕ, ಸ್ಯಾಮ್ಯೂಯಲ್ ಕೊಲೆ ಮಾಡಿದ ಆರೋಪಿ. ನೈಜೀರಿಯಾದ ಪ್ರಜೆಗಳಾದ ಇಬ್ಬರು ವಿದ್ಯಾಭ್ಯಾಸಕ್ಕೆಂದು ಬೆಂಗಳೂರಿಗೆ ಬಂದಿದ್ದು, ಕೆಲ ವರ್ಷಗಳಿಂದ ಜೊತೆಯಾಗಿದ್ದರು. ಆದರೆ ಈ ಇಬ್ಬರು ಸ್ನೇಹಿತರು ಶನಿವಾರ ತಡರಾತ್ರಿ ಪಾರ್ಟಿ ಮಾಡುತ್ತಿದ್ದ ವೇಳೆ ಒಂದು ಹುಡುಗಿಯನ್ನು ಇಬ್ಬರು ಪ್ರೀತಿಸುತ್ತಿದ್ದ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದಿದೆ. ಕೊನೆಗೆ ಜಗಳ ವಿಕೋಪಕ್ಕೇರಿ ಸ್ಯಾಮ್ಯೂಯಲ್ ಚಾಕುವಿನಿಂದ ಮೊರೋಡೆ ಗೆ ಇರಿದಿದ್ದಾನೆ. ಇದರ ಪರಿಣಾಮ ಮೊರೋಡೆ ಸಾವನಪ್ಪಿದ್ದಾನೆ.


ಈ ಘಟನೆಗೆ ಸಂಬಂಧಿಸಿದಂತೆ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಸ್ಯಾಮ್ಯೂಯಲ್ ನನ್ನು ಬಂಧಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮಕ್ಕಳಿಗೆ ಸಿಹಿತಿಂಡಿ ನೀಡಿ ಅಪಹರಿಸುತ್ತಿದ್ದ ಕತರ್ನಾಕ್ ಕಳ್ಳರ ಗ್ಯಾಂಗ್ ಅರೆಸ್ಟ್