Select Your Language

Notifications

webdunia
webdunia
webdunia
webdunia

ಪತ್ನಿಯ ನಡತೆಯ ಬಗ್ಗೆ ಅನುಮಾನಗೊಂಡ ಪತಿ ಮಾಡಿದ್ದೇನು ಗೊತ್ತಾ?

ಪತ್ನಿಯ ನಡತೆಯ ಬಗ್ಗೆ ಅನುಮಾನಗೊಂಡ ಪತಿ ಮಾಡಿದ್ದೇನು ಗೊತ್ತಾ?
ಮಡಿಕೇರಿ , ಭಾನುವಾರ, 3 ನವೆಂಬರ್ 2019 (12:45 IST)
ಮಡಿಕೇರಿ : ಪತ್ನಿಯ ನಡೆತೆ ಸರಿಯಿಲ್ಲ ಎಂದು ಅನುಮಾನಗೊಂಡ ಪತಿಯೊಬ್ಬ ಆಕೆಗೆ 30ಕ್ಕೂ ಅಧಿಕ ಬಾರಿ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ ಘಟನೆ ಶನಿವಾರ ರಾತ್ರಿ ಮಡಿಕೇರಿಯಲ್ಲಿ ನಡೆದಿದೆ.



ಜುಬೈದ(25) ಮೃತಪಟ್ಟ ಪತ್ನಿ. ಶರೀಫ್(27) ಕೊಲೆ ಮಾಡಿದ ಆರೋಪಿ. ಮದುವೆಯಾಗಿ 7 ವರ್ಷವಾದ ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ಪತ್ನಿಯ ನಡತೆ ಬಗ್ಗೆ ಆಗಾಗ ಸಂಶಯಪಡುತ್ತಿದ್ದ ಶರೀಫ್ ಶನಿವಾರ ರಾತ್ರಿ ಇದೇ ವಿಚಾರಕ್ಕೆ ಜಗಳ ನಡೆದಿದ್ದು, ಜಗಳ ವಿಕೋಪಕ್ಕೆ ಹೋಗಿ ಶರೀಫ್ ಪತ್ನಿಗೆ 30ಕ್ಕೂ ಅಧಿಕ ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.

 

ಈ ಘಟನೆಗೆ ಸಂಬಂಧಿಸಿದಂತೆ ಮಡಿಕೇರಿ ನಗರ ಪೊಲೀಸ್  ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಶರೀಫ್ ನನ್ನು ಪೊಲೀಸರು ಬಂಧಿಸಿದ್ದಾರೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಕೆಎಸ್ ಐಸಿ ಜನರಲ್ ಮ್ಯಾನೇಜರ್ ಮೇಲೆ ಸಚಿವ ವಿ.ಸೋಮಣ್ಣ ಫುಲ್ ಗರಂ