ನನ್ನ ಹೊಡೆದು ಹಾಕಲು ಸುಪಾರಿ ನೀಡಲಾಗಿದೆ- ಹೊಸ ಬಾಂಬ್ ಸಿಡಿಸಿದ ಅನರ್ಹ ಶಾಸಕ

ಶುಕ್ರವಾರ, 8 ನವೆಂಬರ್ 2019 (13:04 IST)
ಮಂಡ್ಯ : ನನ್ನ ಹೊಡೆದು ಹಾಕಲು 50 ಲಕ್ಷ ಸುಪಾರಿ ನೀಡಲಾಗಿದೆ ಎಂದು ಅನರ್ಹ ಶಾಸಕ ನಾರಾಯಣಗೌಡ ಹೊಸ ಬಾಂಬ್ ಸಿಡಿಸಿದ್ದಾರೆ.
ಇಂದು ಕೆ.ಆರ್.ಪೇಟೆಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ನನ್ನನ್ನು ಹೊಡೆದು ಹಾಕಬೇಕು ಎಂದು ಕೆ.ಆರ್.ಪೇಟೆಯಲ್ಲಿ 50 ಲಕ್ಷ ಕ್ಕೆ ಸುಪಾರಿ ನೀಡಿದ್ದರು. ಆದರೆ ದೇವರ ದಯೆಯಿಂದ ಯಾರಿಗೂ ನನ್ನನ್ನು ಏನು ಮಾಡಲು ಆಗಲಿಲ್ಲ. ಈ ವಿಚಾರ ತಿಳಿದರೂ ನನ್ನ ಜೊತೆ ಗನ್ ಮ್ಯಾನ್ ನನ್ನು ಇಟ್ಟುಕೊಂಡಿಲ್ಲ  ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.


ಹಾಗೇ ಈ ತಾಲೂಕಿನಲ್ಲಿ ಯಾರು ಕೆಟ್ಟವರಿದ್ದಾರೆ, ಯಾರು ಲೂಟಿ ಮಾಡುತ್ತಿದ್ದಾರೆ. ಅವರಿಗೆ ಪಾಠ ಕಲಿಸೋದೆ ನನ್ನ ಮುಂದಿನ ಗುರಿ. ನಾನು ಇನ್ನು ಯಾವುದೇ ಕಾರಣಕ್ಕೂ ಹೆದರಲ್ಲ ಎಂದು ಅವರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಅಯೋಧ್ಯೆ ತೀರ್ಪು : ರಾಜ್ಯದಲ್ಲಿ ಹೈ ಅಲರ್ಟ್ ಇಲ್ಲ ಎಂದ ಯಡಿಯೂರಪ್ಪ