Publish Date: Wed, 09 May 2018 (09:10 IST)
Updated Date: Wed, 09 May 2018 (09:11 IST)
ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಹಣದ ಹೊಳೆ ಹರಿಯುತ್ತಿರಬಹುದೆಂಬ ಗುಮಾನಿಯಿಂದ ಐಟಿ ಅಧಿಕಾರಿಗಳು ರಾಜಕೀಯ ನಾಯಕರಿಗೆ ಶಾಕ್ ಕೊಡುತ್ತಿದ್ದಾರೆ.
ನಿನ್ನೆ ಬೆಳ್ಳಂ ಬೆಳಿಗ್ಗೆಯಿಂದ ಬಾದಾಮಿ, ಮೊಳಕಾಲ್ಮೂರು, ದಾವಣೆಗೆರೆ ಕ್ಷೇತ್ರಗಳಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನಿನ್ನೆ ಬೆಳಿಗ್ಗೆ ಬಾದಾಮಿಯಲ್ಲಿ ಕಾಂಗ್ರೆಸ್ ನಾಯಕರಿಗೆ ಶಾಕ್ ನೀಡಿದ್ದ ಐಟಿ ಅಧಿಕಾರಿಗಳು ರಾತ್ರಿ ಬಿಜೆಪಿ ನಾಯಕರ ಆಸ್ತಿ ಮೇಲೆ ಬಲೆ ಬೀಸಿದ್ದಾರೆ.
ದಾವಣಗೆರೆ ಚನ್ನಗಿರಿ ಕ್ಷೇತ್ರದ ಅಭ್ಯರ್ಥಿ ಮಾಡಾಳ್ ವಿರೂಪಾಕ್ಷಪ್ಪ, ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ ಶ್ರೀರಾಮುಲು ಆಪ್ತ ಟಿ ರೇವಣ್ಣ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿ ದಾಖಲೆ ಪರಿಶೀಲಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.