Publish Date: Wed, 09 May 2018 (08:54 IST)
Updated Date: Wed, 09 May 2018 (08:57 IST)
ಬೆಂಗಳೂರು: ಬಿಜೆಪಿ ಸೋಲಿಸಲು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ನೆರವು ಪಡೆಯುತ್ತಿದೆ ಎಂದು ಕಾಂಗ್ರೆಸ್ ಮೇಲೆ ಅಮಿತ್ ಶಾ ಆರೋಪ ಮಾಡಿದ್ದಾರೆ.
ಗುಜರಾತ್ ನಲ್ಲಿ ಚುನಾವಣೆ ನಡೆಯುವಾಗ ಕಾಂಗ್ರೆಸ್ ನಾಯಕರು ಪಾಕಿಸ್ತಾನದ ನಾಯಕರೊಂದಿಗೆ ಸಭೆ ಸೇರಿ ಪಿತೂರಿ ನಡೆಸಿದರು. ಕರ್ನಾಟಕದಲ್ಲಿ ಚುನಾವಣೆ ನಡೆಯುವಾಗ ಪಾಕಿಸ್ತಾನದ ಬಾಯಲ್ಲಿ ಇಲ್ಲಿನ ಕಾಂಗ್ರೆಸ್ ನಾಯಕರು ಹೊಗಳುವ ಟಿಪ್ಪು ಸುಲ್ತಾನ್ ಬಗ್ಗೆ ಮೆಚ್ಚುಗೆಯ ಮಾತನ್ನು ಹೇಳಿಸಿದರು.
ಕಾಂಗ್ರೆಸ್ ಗೆ ನಾನು ಮನವಿ ಮಾಡುವುದೇನೆಂದರೆ ದಯವಿಟ್ಟು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನೆರೆಯ ಪಾಕಿಸ್ತಾನವನ್ನು ತರಬೇಡಿ. ಈ ವ್ಯವಸ್ಥೆಯನ್ನು ಧನಾತ್ಮಕವಾಗಿ ಮತ್ತು ನಾಗರಿಕವಾಗಿ ಇಡಲು ಬಿಡಿ ಎಂದು ಅಮಿತ್ ಶಾ ಟ್ವಿಟರ್ ಮೂಲಕ ಕಾಂಗ್ರೆಸ್ ಮೇಲೆ ವಾಗ್ದಾಳಿ ನಡೆಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.