Select Your Language

Notifications

webdunia
webdunia
webdunia
webdunia

ಬಾದಾಮಿ ಐಟಿ ದಾಳಿ ಪ್ರಕರಣ ಹಿನ್ನೆಲೆ ಸಿಎಂ ಇಬ್ರಾಹಿಂ ಟಾಂಗ್

ಬಾದಾಮಿ ಐಟಿ ದಾಳಿ ಪ್ರಕರಣ ಹಿನ್ನೆಲೆ ಸಿಎಂ ಇಬ್ರಾಹಿಂ ಟಾಂಗ್
ಬೆಂಗಳೂರು , ಮಂಗಳವಾರ, 8 ಮೇ 2018 (17:24 IST)
ಬಾದಾಮಿ: ತಡರಾತ್ರಿ ಕೃಷ್ಣಾ ರೆಸಾರ್ಟ್ ಮೇಲೆ ಐಟಿ ದಾಳಿ ನಡೆಸಿ ಗುಡ್ಡ ಅಗೆದು ಇಲಿ ಹಿಡಿದಿದ್ದಾರೆ. ಐಟಿ ಅಧಿಕಾರಿಗಳಿಗೆ ಸಿಎಂ ಇಬ್ರಾಹಿಂ ಬಿಟ್ಟು ಬೇರೇನೂ ಸಿಕ್ಕಿಲ್ಲ ನನ್ನ ನೋಡಿದ್ರು, ನಿಮ್ಮ ಭಾಷಣ ಚೆನ್ನಾಗಿದೆ ಎಂದು ವಾಪಸ್ ಹೋಗಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂ ಟಾಂಗ್ ನೀಡಿದ್ದಾರೆ. 
ಬದಾಮಿಯಲ್ಲಿ ಹಣ ಖರ್ಚು ಮಾಡಿ ಸಿಎಂ ಗೆಲ್ಲುವ ಪರಿಸ್ಥಿತಿ ಇಲ್ಲ. ಇಲ್ಲಿಯ ಜನರೇ ಹಣ ಖರ್ಚು ಮಾಡಿ ಸಿಎಂ ಅವರನ್ನಗೆಲ್ಲಿಸ್ತಾರೆ..
 
ಪಾರಸ್ ಮಲ್ ಖರ್ಚಿಗೆ ತಂದಿರೋ ಹಣ ತೆಗೆದುಕೊಂಡು ಹೋಗಿದ್ದಾರೆ. ಪಾಪ ನಾಸ್ಟಾಕ್ಕೆ ಹಣ ಇಲ್ಲದಂತೆ ಕುಂತಿದ್ದಾನೆ. ರಾಜಕೀಯ ಪ್ರೇರಿತ ದಾಳಿ ಅಲ್ಲದೇ ಇನ್ನೇನು? ಐಟಿ ಅಧಿಕಾರಿಗಳು ನಮ್ಮ ಬೀಗರಲ್ಲ, ನಮ್ಮ ಜೊತೆಗೆ ಬೀಗಸ್ತನ ಮಾಡೋದಕ್ಕೆ ಬಂದಿರಲಿಲ್ಲ.ಅವರು ಬಂದಿದ್ದೇ ನಮ್ಮನ್ನ ಹೆದರಿಸೋಕೆ ಎಂದು ಗುಡುಗಿದರು.
 
ಏನೋ ಸಿಗುತ್ತೆ ಅಂತ ಉದಾಸೆ ಇಟಗೊಂಡು ಬಂದಿದ್ರು ನಮ್ಮ ಹತ್ರ ಏನು ಸಿಗಬೇಕು? ನಾವು ಅಕ್ಷಯ ಪಾತ್ರೆಯಲ್ಲಿ ಬಿಕ್ಷೆ ಬೇಡುವ ಜನ ಬಿಜೆಪಿಯರ ಮೇಲೆ ಐಟಿ ದಾಳಿ ಆಗಲ್ಲ, ಯಾಕೆಂದರೆ ಕೇಂದ್ರದಲ್ಲಿ ಸರಕಾರ ಅವರದ್ದೇ ಇದೆ ಬಿಜೆಪಿಯವರು ದುಡ್ಡು ಹಂಚುವ ಕೆಲಸ ಮಾಡ್ತಾರೆ, ಅದನ್ನ ಜನರೇ ತಡೆಯಬೇಕು, ನಮ್ಮಿಂದಾಗಲ್ಲ ಎಂದು ಬದಾಮಿಯ ಕೋರ್ಟ್ ಹೊಟೆಲ್ ನಲ್ಲಿ ಸಿಎಂ ಇಬ್ರಾಹಿಂ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಚನ್ನಪಟ್ಟಣ ಶಾಸಕ ಸಿ.ಪಿ. ಯೋಗೇಶ್ವರ್ ವಿರುದ್ದ ದಲಿತರ ಆಕ್ರೋಶ