Publish Date: Tue, 08 May 2018 (08:07 IST)
Updated Date: Tue, 08 May 2018 (08:08 IST)
ವಿಜಯಪುರ: ಮೇ 12 ರ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಕಾಂಗ್ರೆಸ್ ಧುರೀಣೆ ಸೋನಿಯಾ ಗಾಂಧಿ ಇಂದು ವಿಜಯಪುರದಲ್ಲಿ ಪ್ರಚಾರ ನಡೆಸಲಿದ್ದಾರೆ.
ವಿಶೇಷವೆಂದರೆ 2 ವರ್ಷಗಳ ಬಳಿಕ ಸೋನಿಯಾ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಸೋನಿಯಾ ಗಾಂಧಿಗಾಗಿ ವಿಜಯಪುರ ಕಾಂಗ್ರೆಸ್ ಸಕಲ ರೀತಿಯಲ್ಲಿ ಸಜ್ಜಾಗಿದೆ.
ಗುಜರಾತ್ ಚುನಾವಣೆಯಲ್ಲೂ ಸೋನಿಯಾ ಪ್ರಚಾರ ಕಣಕ್ಕೆ ಬಂದಿರಲಿಲ್ಲ. ಇದೀಗ ಕರ್ನಾಟಕ ಚುನಾವಣೆ ಅಖಾಡಕ್ಕೆ ಸೋನಿಯಾ ಆಗಮಿಸುತ್ತಿರುವುದು ಪಕ್ಷದಲ್ಲಿ ಹೊಸ ಸಂಚಲನ ಮೂಡಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.