Publish Date: Tue, 08 May 2018 (07:56 IST)
Updated Date: Tue, 08 May 2018 (07:57 IST)
ಬೆಂಗಳೂರು: ಜೆಡಿಎಸ್ ಪ್ರಣಾಳಿಕೆ ಒಪ್ಪುವ ಪಕ್ಷದ ಜತೆಗೆ ಮೈತ್ರಿ ಮಾಡಿಕೊಳ್ಳಲು ಸಿದ್ಧ ಎಂದಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿಗೆ ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
ಮೊದಲೆಲ್ಲಾ ತಾವೇ ಕಿಂಗ್ ಅಂತಿದ್ದರು. ಈಗ ಕಿಂಗ್ ಮೇಕರ್ ಆದರಾ? ಎಂದು ಸಿಎಂ ಸುದ್ದಿಗಾರರ ಜತೆ ಮಾತನಾಡುವಾಗ ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.
ಇತ್ತ ಬಿಜೆಪಿ ಕೂಡಾ ಜೆಡಿಎಸ್ ರಾಜ್ಯಾಧ್ಯಕ್ಷರ ಪ್ರಸ್ತಾಪವನ್ನು ತಿರಸ್ಕರಿಸಿದೆ. ಜೆಡಿಎಸ್ ಜತೆ ಹಿಂದೆ ಆದ ಕಹಿ ಅನುಭವವೇ ಸಾಕು. ಇನ್ನು ಆ ಪಕ್ಷದೊಂದಿಗೆ ಹೊಂದಾಣಿಕೆ ಬೇಡ ಎಂಬ ಅಭಿಪ್ರಾಯ ಬಿಜೆಪಿ ವಲಯದಿಂದ ಕೇಳಿ ಬಂದಿದೆ. ಇದರಿಂದಾಗಿ ಮೈತ್ರಿ ಮಾತುಕತೆ ಪ್ರಸ್ತಾಪವಿಟ್ಟ ಕುಮಾರಸ್ವಾಮಿಗೆ ಮುಖಭಂಗವಾದಂತಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.