Daily Horoscope

Select Your Language

Notifications

webdunia
webdunia
webdunia
webdunia

ಸುದೀಪ್ ನಾಯಕನಟ್ಟಿ ಪ್ರಚಾರ ಸಭೆಯನ್ನು ಚುನಾವಣಾ ಅಧಿಕಾರಿಗಳು ರದ್ದು ಮಾಡಿದ್ಯಾಕೆ ಗೊತ್ತಾ?

ಚಿತ್ರದುರ್ಗ
ಚಿತ್ರದುರ್ಗ : ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಸಿನಿಮಾ ಸ್ಟಾರ್ ಗಳು ಅಬ್ಬರದಿಂದ ತಮ್ಮ ನೆಚ್ಚಿನ ನಾಯಕರ ಪರ ಪ್ರಚಾರ ಮಾಡುತ್ತಿದ್ದು, ನಟ ಸುದೀಪ್ ಅವರು ಕೂಡ  ಸೋಮವಾರ ಶ್ರೀರಾಮುಲು ಹಾಗೂ ಸೋಮಶೇಖರ್ ರೆಡ್ಡಿ ಪರ ಮೊಳಕಾಲ್ಮೂರಿನಲ್ಲಿ ಪ್ರಚಾರ ಮಾಡಿದ್ದಾರೆ. ಆದರೆ ಅವರ ನಾಯಕನಟ್ಟಿ ಪ್ರಚಾರ ಸಭೆಯನ್ನು ಚುನಾವಣಾ ಅಧಿಕಾರಿಗಳು ರದ್ದು ಮಾಡಿದ್ದಾರೆ.


ಸುದೀಪ್ ನಾಯಕನಟ್ಟಿ ತಿಪ್ಪೇರುದ್ರಸ್ವಾಮಿ ದರ್ಶನ ಪಡೆದು ನಂತರ ಕೊಂಡ್ಲಹಳ್ಳಿಯಲ್ಲಿ ಪ್ರಚಾರಕ್ಕೆ ತೆರಳಬೇಕಿತ್ತು. ಆದರೆ ದೇಗುಲದ ಆವರಣದಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿ ತಿಪ್ಪೇಸ್ವಾಮಿ ಪ್ರಚಾರದ ಹಿನ್ನೆಲೆಯಲ್ಲಿ ಸುದೀಪ್ ಅವರ ಪ್ರಚಾರಕ್ಕೆ ಚುನಾವಣಾ ಅಧಿಕಾರಿಗಳು ಅನುಮತಿ ನೀಡದ ಕಾರಣ ನಾಯಕನಟ್ಟಿಯಲ್ಲಿ ರೋಡ್ ಶೋ ರದ್ದು ಮಾಡಿದ್ದಾರೆ. ಆದರೆ ಕಾಲೇಜು ಆವರಣದಲ್ಲಿ ಸಭೆಗೆ ಮಾತ್ರ ಅನುಮತಿ ನೀಡಿದ್ದಾರೆ. ಇದರಿಂದ ಸುದೀಪ್ ವೀಕ್ಷಿಸಲು ಬೆಳಿಗ್ಗೆಯಿಂದ ಬಿಸಿಲಲ್ಲಿ ಕಾದಿದ್ದ ಅಭಿಮಾನಿಗಳು ಮತ್ತು ಬಿಜೆಪಿ ಕಾರ್ಯಕರ್ತರಿಗೆ ನಿರಾಸೆ ಆಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅಮಿತ್ ಶಾ, ಪ್ರಧಾನಿ ಮೋದಿಗೆ ಲೀಗಲ್ ನೋಟಿಸ್ ರವಾನಿಸಿದ ಸಿಎಂ ಸಿದ್ದರಾಮಯ್ಯ