Publish Date: Tue, 08 May 2018 (09:52 IST)
Updated Date: Tue, 08 May 2018 (09:53 IST)
ಬೆಂಗಳೂರು: ಕರ್ನಾಟಕದಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ ಜನಪ್ರಿಯತೆ ಏನೇನೂ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಜನಪ್ರಿಯತೆ ರಾಜ್ಯ ಚುನಾವಣೆಯಲ್ಲಿ ಪ್ರಭಾವಬೀರಬಹುದೇ? ಎಂಬ ಪ್ರಶ್ನೆಗೆ ಉತ್ತರಿಸಿ ಸಿಎಂ ಸಿದ್ದರಾಮಯ್ಯ ‘ಇಲ್ಲ, ಇಲ್ಲ.. ಕರ್ನಾಟಕದಲ್ಲಿ ಅವರ ಜನಪ್ರಿಯತೆ ಸಾಕಷ್ಟು ಕುಸಿದಿದೆ’ ಎಂದಿದ್ದಾರೆ.
‘ಮೋದಿಯೇ ಇಲ್ಲಿ ಜನಪ್ರಿಯರಲ್ಲ ಎಂದ ಮೇಲೆ ಶಾ ಹೇಗೆ ಜನಪ್ರಿಯರಾಗುತ್ತಾರೆ? ಅಮಿತ್ ಶಾ ಪ್ರಚಾರ ರ್ಯಾಲಿ ಎಂದರೆ ಕಾಮಿಡಿ ಶೋ’ ಇದ್ದಂತೆ ಎಂದು ಸಿಎಂ ಲೇವಡಿ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.