Publish Date: Wed, 09 May 2018 (08:36 IST)
Updated Date: Wed, 09 May 2018 (08:40 IST)
ಬೆಂಗಳೂರು: ಮೇ 12 ವಿಧಾನಸಭೆ ಚುನಾವಣೆಗೆ ಸಿಎಂ ಸಿದ್ದರಾಮಯ್ಯ ಪರವಾಗಿ ಬಾದಾಮಿ ಕ್ಷೇತ್ರದಲ್ಲಿ ಪ್ರಚಾರ ಮಾಡಲು ಹೊರಟಿದ್ದ ನಟ ಕಿಚ್ಚ ಸುದೀಪ್ ಇನ್ಮುಂದೆ ಪ್ರಚಾರ ಮಾಡುವ ಕೆಲಸ ಮಾಡಲ್ಲ ಎಂದು ಬಿಟ್ಟಿದ್ದಾರೆ!
ಅದಕ್ಕೆ ಕಾರಣ ಸ್ನೇಹಿತರು, ಅಭಿಮಾನಿಗಳ ಒತ್ತಾಸೆಯಂತೆ! ಟ್ವಿಟರ್ ನಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿರುವ ಕಿಚ್ಚ ಸುದೀಪ್, ರಾಜಕೀಯ ಪಕ್ಷಕ್ಕೆ ಸೀಮಿತವಾಗಬೇಡಿ ಎಂದು ಅಭಿಮಾನಿಗಳು, ಸ್ನೇಹಿತರು ಒತ್ತಾಯಿಸಿರುವ ಕಾರಣ ಚುನಾವಣಾ ಪ್ರಚಾರಕ್ಕೆ ಹೋಗದೇ ಇರಲು ನಿರ್ಧರಿಸಿದ್ದೇನೆ ಎಂದಿದ್ದಾರೆ.
ಓರ್ವ ನಟನಾಗಿ ಪಕ್ಷಾತೀತವಾಗಿ ಕಿಚ್ಚ ಸುದೀಪ್ ಗೆ ಆರಾಧಕರಿದ್ದಾರೆ. ಹೀಗಿರುವಾಗ ಒಂದು ರಾಜಕೀಯ ಪಕ್ಷದ, ಅಭ್ಯರ್ಥಿಯ ಪರ ಪ್ರಚಾರ ಮಾಡುವುದರಿಂದ ನೋವಾಗುತ್ತದೆ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿರುವುದಕ್ಕೆ ಸುದೀಪ್ ಬೆಲೆ ಕೊಟ್ಟು ಈ ನಿರ್ಧಾರಕ್ಕೆ ಬಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.