Select Your Language

Notifications

webdunia
webdunia
webdunia
webdunia

ದಲಿತರ ಏರಿಯಾದಲ್ಲಿ ಆರ್ ಎಸ್ ಎಸ್, ಬಿಜೆಪಿಯವರಿಗೆ ನೋ ಎಂಟ್ರಿ!

ದಲಿತರ ಏರಿಯಾದಲ್ಲಿ ಆರ್ ಎಸ್ ಎಸ್, ಬಿಜೆಪಿಯವರಿಗೆ ನೋ ಎಂಟ್ರಿ!
ಕಲಬುರಗಿ , ಮಂಗಳವಾರ, 8 ಮೇ 2018 (15:55 IST)
ದಲಿತರ ಏರಿಯಾದಲ್ಲಿ ಆರ್ ಎಸ್ ಎಸ್ ಮತ್ತು ಬಿಜೆಪಿಗೆ ಮತಕೇಳಲು ಅವಕಾಶವಿಲ್ಲ ಹೀಗಂತ ಕಲಬುರಗಿ ಜಿಲ್ಲೆಯ ಬೆಳಮಗಿ ಗ್ರಾಮದ ದಲಿತರ ಏರಿಯಾದಲ್ಲಿ  ಬ್ಯಾನರ್ ಹಾಕಲಾಗಿದೆ. 
ಸಂವಿಧಾನ ವಿರೋಧಿಸುವ, ಬಾಬಾಸಾಹೇಬರನ್ನು ಅವಮಾನಿಸುವ, ದಲಿತರನ್ನು ನಿಂದಿಸುವ, ಮಹಿಳೆಯರನ್ನು ಅಪಮಾನಿಸುವ ಬಿಜೆಪಿ, ಆರ್ ಎಸ್ ಎಸ್ ಗೆ ಮತ ಕೇಳಲು ನಮ್ಮ ನಗರದಲ್ಲಿ ಪ್ರವೇಶವಿಲ್ಲ ಎಂಬ ಬ್ಯಾನರ್‌ನ್ನು ಗ್ರಾಮಸ್ಥರು ಅಳವಡಿಸಿದ್ದಾರೆ. 
 
ಬೆಳಮಗಿ ಗ್ರಾಮ ಮಾಜಿ ಸಚಿವರಾದ ರೇವುನಾಯಕ್ ಬೆಳಮಗಿ ಅವರ ಸ್ವಗ್ರಾಮವಾಗಿದೆ. ಅಂಬೇಡ್ಕರ್ ಭವನದ ಮೇಲೂ ಹಾಕಿದ ಬ್ಯಾನರ್ ಎಲ್ಲರ ಚರ್ಚೆ ಗೆ ಗ್ರಾಸವಾಗುತ್ತಿದೆ. 
 
ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಬೆಳಮಗಿ ಗ್ರಾಮದಲ್ಲಿ ಈ ರೀತಿ ಬ್ಯಾನರ್ ಅಳವಡಿಸಲಾಗಿದೆ. ಬಿಜೆಪಿ ಟಿಕೆಟ್‌ ಕೈತಪ್ಪಿದ್ದರಿಂದ ಕಲಬುರಗಿ ಗ್ರಾಮೀಣ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ರೇವು ನಾಯಕ ಬೆಳಮಗಿ ಕಣಕ್ಕೆ ಇಳಿದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಷ್ಯಾದ ಅಧ್ಯಕ್ಷರಾಗಿ ನಾಲ್ಕನೇ ಬಾರಿ ಪ್ರಮಾಣ ವಚನ ಸ್ವೀಕರಿಸಿದ ವ್ಲಾಡಿಮಿರ್‌ ಪುಟಿನ್‌