Publish Date: Wed, 09 May 2018 (09:06 IST)
Updated Date: Wed, 09 May 2018 (09:08 IST)
ಮೈಸೂರು: ಮೇ 12 ರಂದು ವಿಧಾನಸಭೆ ಚುನಾವಣೆಗೆ ಇನ್ನೂ ನಾಲ್ಕು ದಿನ ಬಾಕಿಯಿದೆ ಎನ್ನುವಾಗಲೇ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರ ಬಾಯಿಯಂದಲೇ ಜೆಡಿಎಸ್ ಸೋಲಿನ ಮಾತು ಬಂದಿದೆ.
ಮೈಸೂರಿನಲ್ಲಿ ಪಕ್ಷದ ಪ್ರಚಾರ ಮಾಡಿರುವ ದೇವೇಗೌಡರು ಇಲ್ಲಿನ ವರುಣಾ, ಕೆಆರ್ ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲುವು ಕಷ್ಟ ಕಷ್ಟ ಎಂದಿದ್ದಾರೆ. ವರುಣಾದಲ್ಲಿ ಸಿಎಂ ಸಿದ್ದರಾಮಯ್ಯ ಪುತ್ರ ಸ್ಪರ್ಧಿಸುತ್ತಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿರುವ ದೇವೇಗೌಡರು ಇಂತಹದ್ದೊಂದು ಹೇಳಿಕೆ ನೀಡಿದ್ದಾರೆ. ಈಗಾಗಲೇ ಕುಮಾರಸ್ವಾಮಿ ಕೂಡಾ ಮೈತ್ರಿ ಬಗ್ಗೆ ಮಾತನಾಡಲು ಶುರು ಮಾಡಿದ್ದು, ಜೆಡಿಎಸ್ ವಲಯದಲ್ಲೇ ಅಸಮಾಧಾನ ಕೇಳಿಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.