Select Your Language

Notifications

webdunia
webdunia
webdunia
webdunia

ಹೈಕೋರ್ಟಿನ ನ್ಯಾಯಾದೀಶರ ಮೂಲಕ ತನಿಖೆ ಆಗಬೇಕು -ವಾಟಾಳ್ ನಾಗರಾಜ್

ಹೈಕೋರ್ಟಿನ ನ್ಯಾಯಾದೀಶರ ಮೂಲಕ ತನಿಖೆ ಆಗಬೇಕು -ವಾಟಾಳ್ ನಾಗರಾಜ್
bangalore , ಬುಧವಾರ, 11 ಜನವರಿ 2023 (17:45 IST)
ನಿನ್ನೆ ನಡೆದ ಮೆಟ್ರೋ ಅಪಘಾತದಿಂದ ಬಹಳ ನೋವಾಗಿದೆ ಎಂದು ವಿಧಾನಸೌದದಲ್ಲಿ ವಾಟಾಳ್ ನಾಗರಾಜ್ ಹೇಳಿದ್ದಾರೆ.
 
ಇದು ೪೦ ಲಕ್ಷ ರೂದಲ್ಲಿ ಮುಗಿದು ಹೋಯಿತು.ಸತ್ತವರ ಅಂತ್ಯಕ್ರಿಯೇನು ಆಯಿತು .ಸತ್ತವರಿಗೆ ಹಣ ಕೊಟ್ಟರೆ ಮುಗಿದು ಹೋಯಿತಾ...?ಮುಖ್ಯಮಂತ್ರಿ ಗಳು ಅವರ ಕೆಲಸ ಮರೆತರು ಅಧಿಕಾರಿಗಳು ಮರೆತರು.ಮುಂದೇನು ಲೆಕ್ಕಾಚಾರವಾಗಿ ಗಂಭಿರತೆಯಿಲ್ಲ ಗೌರವ ವಿಲ್ಲ .ಎಲ್ಲೋ ಒಂದಕಡೆ ಜವಾಬ್ದಾರಿಯಲ್ಲಿ ವಿಪಲವಾಗಿದ್ದೇವೆ .ನಮ್ಮ ಸರ್ಕಾರ ಆಢಳಿತದಲ್ಲಿ ವಿಪಲವಾಗಿದೆ.ಮುಖ್ಯಮಂತ್ರಿಗಳು ಮೇಟ್ರೋ ಅಧಿಕಾರಿಗಳು ಅವರ ಆತ್ಮ ಮುಟ್ಟಿ ನೋಡಿಕೊಳ್ಳಲಿ.ಮಂತ್ರಿಗಳು ಮುಖ್ಯಮಂತ್ರಿಗಳು ಮಂತ್ರಿ ಮಂಡಲದವರು ರಾಜೀನಾಮೆ ಕೊಡಬೇಕಿತ್ತು .ಮಾನವಿಯತೆ ಇಲ್ಲವೆ ಇಲ್ವಾ ?ಮಗು ಸತ್ತಿದೆ ಮಗುವಿನ ತಾಯಿ ಸತ್ತಿದ್ದಾರೆ.ವಿರೋಧ ಪಕ್ಷ ಸತ್ತೊಗಿದೆ.ಇದು ನಿಜವಾಗಲು ಕೊಲೆ .ಜವಾಬ್ದಾರಿ ಸಂಪೂರ್ಣ ಸರ್ಕಾರದು ಅವರು ಎಲ್ಲರೂ ರಾಜೀನಾಮೆ ಕೊಡಬೇಕಿತ್ತು.ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಜವಾಬ್ದಾರಿ ಇಲ್ಲ. ಪೊಲಿಸ್ ರಿಗೆ ಜವಾಬ್ದಾರಿ ಇಲ್ಲ.ಎಪ್ ಐ  ಆರ್ ಹಾಕ್ತಾರೆ ಅಂತೇ ಇಷ್ಟೆನಾ?ಎಮ್ ಎಲ್ ಎ ,ಎಂ ಪಿ , ಅಧಿಕಾರಿಗಳು ಸತ್ತರು ಅವರಿಗೂ ಒಂದು ರೇಟ್ ಪೀಕ್ಸ್ ಮಾಡಲಿ.ಉನ್ನತ ಮಟ್ಟದ ತನಿಖೆ ಆಗಲೇಬೇಕು .ಹೈಕೋರ್ಟಿನ ನ್ಯಾಯಾದೀಶರ ಮೂಲಕ ತನಿಖೆ ಆಗಬೇಕು ಎಂದು ವಾಟಾಳ್ ನಾಗರಾಜ್ ಒತ್ತಾಯಿಸಿದ್ದಾರೆ.
 
ಕರ್ನಾಟಕದ ಟ್ಯಾಬ್ಲೋ ಮೇರವಣಿಗೆ ರದ್ದು ವಿಚಾರವಾಗಿಯೂ ಪ್ರತಿಕ್ರಿಯಿಸಿದ್ದು,ಇದು ಸಮಗ್ರ ಕನ್ನಡಿಗರಿಗೆ ಮಾಡಿದಂತಹ ಅಪಮಾನ ಅಗೌರವ .ನಮ್ಮ ಪಾರ್ಲಿಮೆಂಟಿನ ಸದಸ್ಯರು ಶಕ್ತಿ ಇಲ್ಲಾ ಹಾಗಾದ್ರೆ  ಇವರಿಗೆ ಗೌರವ ವಿಲ್ಲ.ಪ್ರಧಾನಿ ಗಳಿಗೆ ಹೇಳೊಕೆ ಆಗ್ತಾಯಿಲ್ಲ.ಮುಖ್ಯಮಂತ್ರಿಗಳು ಸರ್ವ ಪಕ್ಷ  ನಿಯೋಗ ದೊಂದಿಗೆ ದೆಹಲಿಗೆ ಹೋಗಬೇಕು.ಯಾವುದೇ ಕಾರಣಕ್ಕು ನಮ್ಮ ಸ್ಥಬ್ದ ಚಿತ್ರ ಪ್ರದರ್ಶನದ ನಿಲ್ಲಬಾರದು .ಎಲ್ಲಾ ಸಂಘಟನೆಗಳು ಸೇರಿ  ಹೋರಾಟ ಮಾಡುತ್ತೇವೆ ಎಂದು ವಾಟಾಳ್ ನಾಗರಾಜ್ ಹೇಳಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಸ್ಮಶಾನ ಕಾರ್ಮಿಕರ ಜೊತೆ ಉಪಹಾರ ಸವಿದ ಸಿಎಂ