Select Your Language

Notifications

webdunia
webdunia
webdunia
webdunia

ಕತ್ತೆಗೆ ಹಾರ ಹಾಕಿ ವಿನೂತನವಾಗಿ ವಾಟಾಳ್ ನಾಗರಾಜ್ ರವರಿಂದ ವೈಭವ ಸನ್ಮಾನ ಸಮಾರಂಭ

Vatal Nagaraj gave a wonderful honor ceremony by garlanding the donkey
bangalore , ಭಾನುವಾರ, 1 ಜನವರಿ 2023 (19:36 IST)
ಹೊಸ ವರ್ಷಕ್ಕೆ ಸೌಮ್ಯ ಪ್ರಾಣಿ, ಶ್ರಮ ಜೀವಿ ಕತ್ತೆಗೆ ಹಾರ ಹಾಕಿ ವಿನೂತನವಾಗಿ ವಾಟಾಳ್ ನಾಗರಾಜ್ ರವರು ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ವೈಭವ ಸನ್ಮಾನ ಸಮಾರಂಭ ನಡೆಸಿದ್ರು ಪಾವಿತ್ರ್ಯತೆ, ಪ್ರಾಮಾಣಿಕತೆ, ಸೌಮ್ಯತೆ, ಶ್ರಮ ಜೀವಿ, ಪ್ರೀತಿಯ ಪ್ರಾಣಿ ಕ ಸಮಗ್ರ ಕತ್ತೆಗಳ ಅಭಿವೃದ್ಧಿಯಾಗಬೇಕು. ಕತ್ತೆಯ ಹಾಲಿನ ಡೈರಿ ನಿರ್ಮಾಣವಾಗಬೇಕು. ಭ್ರಷ್ಟಾಚಾರ ನಿಲ್ಲಬೇಕು, ರಾಜಕೀಯ, ಸರ್ಕಾರ ಸೇರಿದಂತೆ ಎಲ್ಲೆಲ್ಲೂ ಭ್ರಷ್ಟಾಚಾರ, ಎಲ್ಲ ರಾಜಕೀಯ ಪಕ್ಷಗಳು ಭ್ರಷ್ಟಾಚಾರ ಕೂಟವಾಗಿದೆ. ರಾಜಕಾರಣಿಗಳು ಭ್ರಷ್ಟಾಚಾರ ಪಾಳೆಗಾರರಾಗಿದ್ದಾರೆ. ಎಲ್ಲೆಲ್ಲೂ ಜಾತಿ, ಭಾಷಾವಾರು ಪ್ರಾಂತ್ಯದ ಬದಲು ಜಾತಿವಾರು ಪ್ರಾಂತ್ಯವಾಗುತ್ತಿದೆ. ಭಾಷಾವಾರು ಪ್ರಾಂತ್ಯಗಳಿಗೆ ಮನ್ನಣೆ ದೊರಕಬೇಕು. ಭ್ರಷ್ಟಾಚಾರಿಗಳು ಶಾಸಕಾಂಗಕ್ಕೆ ಬರಬಾರದು, ಭ್ರಷ್ಟಾಚಾರಿಗಳು ಚುನಾವಣೆಗೆ ನಿಲ್ಲಬಾರದು. ಲಂಚ, ಲೂಟಿ ನಿಲ್ಲಬೇಕು. ಚುನಾಯಿತ ಪ್ರತಿನಿಧಿ ಪರಿಶುದ್ಧವಾಗಿರಬೇಕು. ಪ್ರಾಮಾಣಿಕ ಪಕ್ಷಗಳು ಬೇಕು, ಪ್ರಾಮಾಣಿಕರು ಅಧಿಕಾರಕ್ಕೆ ಬರಬೇಕು, ಎಲ್ಲರಿಗೂ ನ್ಯಾಯ ದೊರಕಬೇಕು, ಚುನಾವಣೆಯಲ್ಲಿ ಭ್ರಷ್ಟಾಚಾರ ನಿಲ್ಲಬೇಕು. ಸಮಗ್ರವಾಗಿ ಚುನಾವಣಾ ಕಾಯ್ದೆ ಬದಲಾಗಬೇಕು. ಪ್ರಜಾಪ್ರಭುತ್ವದಲ್ಲಿ ಪ್ರಾಮಾಣಿಕತೆಗೆ ಬೆಲೆ ಇರಬೇಕು ಎಂದು ತಿಳಿಸಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

14ನೇ ದಿನದ ಎನ್.ಪಿ.ಎಸ್ ನೌಕರರ ಪ್ರತಿಭಟನೆಯಲ್ಲಿ ರೆಡ್ಡಿ ಭಾಗಿ