Publish Date: Thu, 14 Dec 2023 (21:10 IST)
Updated Date: Thu, 14 Dec 2023 (19:14 IST)
150 ರೂಪಾಯಿ ಹಣ ನೀಡುವ ವಿಚಾರಕ್ಕೆ ವ್ಯಕ್ತಿಯೋರ್ವ ತನ್ನ ಸ್ನೇಹಿತನನ್ನು ಕೊಲೆ ಮಾಡಿರುವ ಘಟನೆ ಚಿತ್ರದುರ್ಗ ತಾಲೂಕಿನ ಭರಮಸಾಗರ ಹೋಬಳಿಯ ಕೊಡಗವಳ್ಳಿ ಗ್ರಾಮದಲ್ಲಿ ನಡೆದಿದೆ.
ಇನ್ನು ಕೊಡಗವಳ್ಳಿ ಗ್ರಾಮದ ನಾಗರಾಜಪ್ಪನನ್ನು ಕುಡಿದ ಅಮಲಿನಲ್ಲಿ ಆತನ ಸ್ನೇಹಿತ ಶೇಖರಪ್ಪ ಕೊಲೆ ಮಾಡಿದ್ದಾನೆ ಎನ್ನಲಾಗಿದ್ದು ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.