Select Your Language

Notifications

webdunia
webdunia
webdunia
webdunia

ಕುಡಿದ ನಶೆಯಲ್ಲಿ ಜೊತೆಯಲ್ಲಿದ್ದ ಸ್ನೇಹಿತನ ಹತ್ಯೆ

ಕುಡಿದ ನಶೆಯಲ್ಲಿ ಜೊತೆಯಲ್ಲಿದ್ದ ಸ್ನೇಹಿತನ ಹತ್ಯೆ
bangalore , ಬುಧವಾರ, 9 ಆಗಸ್ಟ್ 2023 (18:01 IST)
ಆತ ರಾತ್ರಿ ಪೂರ್ತಿ ಜೊತೆಯಲ್ಲಿ ಪಾರ್ಟಿ ಮಾಡಿದ್ದಾನೆ, ಅದೇನಾಯ್ತೋ ಅವನಿಗೆ ಕುಡಿದ ನಶೆಯಲ್ಲಿ ಜೊತೆಯಲ್ಲಿ ದ್ದ ಸ್ನೇಹಿತನನ್ನೆ ಹತ್ಯೆ ಮಾಡಿದ್ದಾನೆ. ಬೆಂಗಳೂರಿನಲ್ಲಿ ಮತ್ತೊಂದು ಭೀಕರ ಕೊಲೆ ನಡೆದಿದೆ. ಚೇತನ್ ಎಂಬ 21 ವರ್ಷದ ಯುವಕನನ್ನ ಭೀಕರವಾಗಿ ಕೊಲೆಗೈದಿರೋ ಅಮಾನುಲ್ಲ ಎಂಬಾತ ಕೊನೆಗೆ ತಾನೇ ಬಂದು ಪೊಲೀಸರಿಗೆ ಸೆರೆಂಡರ್ ಆಗಿದ್ದಾನೆ. ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಕೊಮ್ಮಗಟ್ಟ ಭಾಗದಲ್ಲಿ ಈ ಭೀಕರ ಕೊಲೆ ನಡೆದಿದೆ. ಕೊಲೆಯಾದ ಚೇತನ್ & ಆರೋಪಿ ಅಮಾನುಲ್ಲ  ಮೊದಲಿಂದಲೂ ಪರಿಚತರೇ. ಆದರೆ ಇಬ್ಬರ ಮಧ್ಯೆ ಆಗಾಗ ಸಣ್ಣಪುಟ್ಟ ವಿಚಾರಕ್ಕೆ ಜಗಳ ಆಗ್ತಿತ್ತಂತೆ. ನಿನ್ನೆ ರಾತ್ರಿ ಈ ಇಬ್ಬರು ಕೊಮ್ಮಗಟ್ಟ ಗ್ರೌಂಡ್ ಬಳಿ ಮುಖಾಮುಖಿಯಾಗಿದ್ರು. ಈ ವೇಳೆ ಮತ್ತೆ ಇಬ್ಬರ ಮಧ್ಯೆ ಜಗಳ ಆಗಿದ್ದು, ಈ ವೇಳೇ ಅಮಾನುಲ್ಲ ಅಲ್ಲೇ ಇದ್ದ ಕಲ್ಲು ಎತ್ತಿಹಾಕಿ ಚೇತನ್ನನ್ನು ಭೀಕರವಾಗಿ ಹತ್ಯೆ ಮಾಡಿದ್ದಾನೆ. ಸಣ್ಣಪುಟ್ಟ ವೈಮನಸ್ಸಿಗೆ ಎದುರಾಳೀಯ ಪ್ರಾಣವನ್ನೇ ತೆಗೆದ ಅಮಾನುಲ್ಲ, ಇಂದು ಬೆಳಿಗ್ಗೆ ತಾನೇ ಕೆಂಗೇರಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಸದ್ಯ ಕೃತ್ಯದ ಬಗ್ಗೆ ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕ್ತಿದ್ದು, ಹತ್ಯೆಗೆ ಅಸಲಿ ಕಾರಣ ಏನೆಂದು ಹೊರಬರಬೇಕಿದೆ. ಅದೇ ಏನೆ ಹೇಳಿ ಜೊತೆಯಲ್ಲಿ ಇರೋ ಸ್ನೇಹಿತರೇ ಹೀಗೆ ಮಾಡಿದ್ರೆ ಯಾರನ್ನಾ ನಂಬಬೇಕೋ ಭಗವಂತನೇ ಬಲ್ಲ.
 

Share this Story:

Follow Webdunia kannada

ಮುಂದಿನ ಸುದ್ದಿ

ಇನ್ನಷ್ಟು ಉತ್ಕೃಷ್ಟ ಆಗಲಿದೆ ಕೆಎಂಎಫ್