Publish Date: Mon, 26 Feb 2018 (10:00 IST)
Updated Date: Mon, 26 Feb 2018 (10:04 IST)
ಬೆಂಗಳೂರು: ಬಡವರ ಹಸಿವು ನೀಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಆರಂಭಿಸಿದ್ದ ಅಗ್ಗದ ಬೆಲೆಯ ಇಂದಿರಾ ಕ್ಯಾಂಟೀನ್ ಗಳ ಮೆನು ಬದಲಾವಣೆಯಾಗಲಿದೆ.
ಇದುವರೆಗೆ ಬಿಸಿಬೇಳೆಬಾತ್, ಮೊಸರನ್ನ, ಚಿತ್ರಾನ್ನ ಮುಂತಾದ ಸಾದಾ ಆಹಾರಗಳನ್ನು ನೀಡಲಾಗುತ್ತಿತ್ತು. ಇನ್ನು ಮುಂದೆ ಉತ್ತರ ಭಾರತೀಯ ಶೈಲಿಯ ಕೆಲವು ಆಹಾರಗಳೂ ಸಿಗಲಿವೆ.
ಮಾರ್ಚ್ 1 ರಿಂದ ಈ ಬದಲಾವಣೆಯಾಗಲಿದ್ದು, ಇಂದಿರಾ ಕ್ಯಾಂಟೀನ್ ನಲ್ಲಿ ಇನ್ನು ಬಟಾಣಿ ಪಲಾವ್, ತಟ್ಟೆ ಇಡ್ಲಿ, ಪಾಲಕ್ ಇಡ್ಲಿ, ಆಲೂ ಕರಿ, ಆಲೂ ಪಾವ್ ಮುಂತಾದ ಹೊಸ ತಿಂಡಿಗಳನ್ನೂ ಸವಿಯಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ