Select Your Language

Notifications

webdunia
webdunia
webdunia
webdunia

ಬಾಳೆಹಣ್ಣು ಸೇವಿಸುವುದರಿಂದ ಈ ಸಮಸ್ಯೆಗಳು ಬರಲ್ಲ

ಬಾಳೆಹಣ್ಣು ಸೇವಿಸುವುದರಿಂದ ಈ ಸಮಸ್ಯೆಗಳು ಬರಲ್ಲ
ಬೆಂಗಳೂರು , ಭಾನುವಾರ, 25 ಫೆಬ್ರವರಿ 2018 (11:16 IST)
ಬೆಂಗಳೂರು: ಬಾಳೆಹಣ್ಣು ಜಗತ್ತಿನ ಯಾವುದೇ ಮೂಲೆಯಲ್ಲಿ ಸುಲಭವಾಗಿ ಸಿಗುವ ಪೋಷಕಾಂಶಭರಿತ ಆಹಾರ ವಸ್ತು. ಪ್ರತಿ ನಿತ್ಯ ಇದನ್ನು ಸೇವಿಸುವುದರಿಂದ ಕೆಲವು ರೋಗಗಳಿಗೆ ತಂತಾನೇ ಪರಿಹಾರ ಸಿಗುತ್ತದೆ.
 


ಮುಟ್ಟಿನ ಸಮಸ್ಯೆ
ಬಾಳೆಹಣ್ಣಿನಲ್ಲಿ ವಿಟಮಿನ್ ಬಿ6 ಹೇರಳವಾಗಿದ್ದು, ಇದು ಮಹಿಳೆಯರಲ್ಲಿ ಮುಟ್ಟಿನ ಮೊದಲು ಬರುವ ಸಾಮಾನ್ಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.

ರಕ್ತದೊತ್ತಡ
ಬಾಳೆಹಣ್ಣಿನಲ್ಲಿರುವ ಪೊಟೇಷಿಯಂ ಅಂಶ ನಮ್ಮ ದೇಹದಲ್ಲಿ ರಕ್ತದೊತ್ತಡ ನಿಯಂತ್ರಣದಲ್ಲಿಡಲು ಸಹಕರಿಸುತ್ತದೆ.

ಮಲಬದ್ಧತೆ
ಬಾಳೆಹಣ್ಣು ಜೀರ್ಣಕ್ರಿಯೆಯನ್ನೂ ಸುಗಮಗೊಳಿಸುತ್ತದೆ. ಹೀಗಾಗಿ ಮಲಬದ್ಧತೆ ಸಮಸ್ಯೆಗೆ ಹೇಳಿ ಮಾಡಿಸಿದ ಆಹಾರ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಆಲೂ ಕರಿ ಮಾಡುವ ವಿಧಾನ ಇಲ್ಲಿದೆ ನೋಡಿ