Publish Date: Sat, 24 Feb 2018 (08:57 IST)
Updated Date: Sat, 24 Feb 2018 (09:00 IST)
ಬೆಂಗಳೂರು: ಬೇಜಾರಾದಾಗ ಕುರುಕಲು ತಿನ್ನಬೇಕೆಂದೆನಿಸಿದರೆ ಪಾಲಕ್ ಸೊಪ್ಪಿನ ಸಿಂಪಲ್ ಚಿಪ್ಸ್ ಮಾಡಿಕೊಂಡು ತಿನ್ನಿ. ಮಾಡೋದು ಹೇಗೆ? ಇಲ್ಲಿ ನೋಡಿ.
ಬೇಕಾಗುವ ಸಾಮಗ್ರಿಗಳು
ಪಾಲಕ್ ಸೊಪ್ಪು
ಹಸಿಮೆಣಸು
ಮೈದಾ ಹಿಟ್ಟು
ರವೆ
ಕಾರ್ನ್ ಫ್ಲೋರ್
ಎಳ್ಳು ಅಥವಾ ಜೀರಿಗೆ
ಉಪ್ಪು
ತುಪ್ಪ
ಕರಿಯಲು ಎಣ್ಣೆ
ಮಾಡುವ ವಿಧಾನ
ಪಾಲಕ್ ಸೊಪ್ಪು ಮತ್ತು ಹಸಿಮೆಣಸಿನಕಾಯಿಯನ್ನು ಬಾಡಿಸಿ ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಿ. ಒಂದು ಪಾತ್ರೆಯಲ್ಲಿ ಒಂದು ಕಪ್ ಮೈದಾ ಹಿಟ್ಟು, ಅರ್ಧ ಕಪ್ ರವೆ, ಎರಡು ಸ್ಪೂನ್ ಕಾರ್ನ್ ಫ್ಲೋರ್, ತುಪ್ಪ ಮತ್ತು ಸ್ವಲ್ಪ ಉಪ್ಪು ಹಾಕಿಕೊಂಡು ಕಲಸಿಕೊಳ್ಳಿ. ಇದಕ್ಕೆ ರುಬ್ಬಿದ ಮಿಶ್ರಣವನ್ನೂ ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ.
ನಂತರ ಚಪಾತಿ ಆಕಾರಕ್ಕೆ ಲಟ್ಟಿಸಿಕೊಂಡು ಚಾಕುವಿನಿಂದ ಚಿಪ್ಸ್ ಆಕಾರದಲ್ಲಿ ಕತ್ತರಿಸಿಕೊಳ್ಳಿ. ಇದನ್ನು ಎಣ್ಣೆಗೆ ಹಾಕಿ ಕರಿದುಕೊಳ್ಳಿ. ರುಚಿಕರ ಪಾಲಕ್ ಸೊಪ್ಪಿನ ಚಿಪ್ಸ್ ರೆಡಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ