Select Your Language

Notifications

webdunia
webdunia
webdunia
webdunia

ತೂಕ ಕಳೆದುಕೊಳ್ಳಬೇಕಾದರೆ ಈ ತರಕಾರಿ ಸೇವಿಸಿ

ತೂಕ ಕಳೆದುಕೊಳ್ಳಬೇಕಾದರೆ ಈ ತರಕಾರಿ ಸೇವಿಸಿ
ಬೆಂಗಳೂರು , ಶುಕ್ರವಾರ, 23 ಫೆಬ್ರವರಿ 2018 (08:49 IST)
ಬೆಂಗಳೂರು: ತೂಕ ಕಳೆದುಕೊಳ್ಳಬೇಕಾದರೆ ಆಹಾರದಲ್ಲಿ ಕಟ್ಟುನಿಟ್ಟು ಅಗತ್ಯ. ಬೊಜ್ಜು ಕರಗಿಸಲು ಪ್ರಯತ್ನ ಮಾಡುವವರು ಈ ಕೆಳಗಿನ ತರಕಾರಿಗಳನ್ನು ಸೇವಿಸುವುದು ಒಳಿತು.
 

ಸೊಪ್ಪು ತರಕಾರಿ
ಸೊಪ್ಪು ತರಕಾರಿಗಳಲ್ಲಿ ಅಗತ್ಯವಾದ ಪೋಷಕಾಂಶಗಳು ಕಬ್ಬಿಣದಂಶ ಹೇರಳವಾಗಿರುತ್ತದೆ. ಹೀಗಾಗಿ ಇದನ್ನು ಸಲಾಡ್ ಅಥವಾ ಬೇಯಿಸಿ ಸೇವಿಸುವುದು ಉತ್ತಮ.

ಕಾಲಿಫ್ಲವರ್
ಕಾಲಿಫ್ಲವರ್ ನಲ್ಲಿ ಕೊಬ್ಬಿನಂಶವಿಲ್ಲ. ಇದರಲ್ಲಿ ನಾರಿನಂಶ ಹೆಚ್ಚು. ಹಾಗಾಗಿ ಇದನ್ನು ನಿಮ್ಮ ಡಯಟ್ ನಲ್ಲಿ ಸೇರಿಸಿಕೊಳ್ಳಿ.

ಸೌತೆಕಾಯಿ
ಸಾಕಷ್ಟು ನೀರಿನಂಶವಿರುವ ಸೌತೆಕಾಯಿಯಲ್ಲಿ ಕೊಬ್ಬಿನಂಶವಿಲ್ಲ. ಅಲ್ಲದೆ ಇದು ದೇಹವನ್ನು ನಿರ್ಜಲೀಕರಣಕ್ಕೊಳಗಾಗದಂತೆ ನೋಡಿಕೊಳ್ಳುತ್ತದೆ.

ಕ್ಯಾರೆಟ್
ಕ್ಯಾರೆಟ್ ನಲ್ಲಿ ಬೀಟಾ ಕೆರೊಟಿನ್ ಮತ್ತು ನಾರಿನಂಶ ಹೇರಳವಾಗಿರುತ್ತದೆ. ಹಸಿಯಾಗಿ ಸೇವಿಸುವುದು ತುಂಬಾ ಉತ್ತಮ.

ಸಿಹಿ ಗೆಣಸು
ಸಿಹಿ ಗೆಣಸಿನಲ್ಲಿ ನಾರಿನಂಶ ಹೇರಳವಾಗಿದ್ದು, ಕಡಿಮೆ ಕ್ಯಾಲೊರಿ ಹೊಂದಿದೆ. ಹೀಗಾಗಿ ಡಯಟ್ ಮಾಡುವವರಿಗೆ ಹೇಳಿ ಮಾಡಿಸಿದ ಆಹಾರ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹಾಲು ಕುಡಿಯುವುದರಿಂದ ನಿಜವಾಗಿಯೂ ಟಾಲರ್, ಸ್ಟ್ರಾಂಗರ್ ಆಗುತ್ತೇವೆಯೇ?!