Select Your Language

Notifications

webdunia
webdunia
webdunia
webdunia

ಪ್ರತಿ ನಿತ್ಯ ಎಷ್ಟು ಮೊಟ್ಟೆ ಸೇವಿಸಿದರೆ ಉತ್ತಮ?

ಪ್ರತಿ ನಿತ್ಯ ಎಷ್ಟು ಮೊಟ್ಟೆ ಸೇವಿಸಿದರೆ ಉತ್ತಮ?
ಬೆಂಗಳೂರು , ಶನಿವಾರ, 24 ಫೆಬ್ರವರಿ 2018 (08:54 IST)
ಬೆಂಗಳೂರು: ತೂಕ ಕಳೆದುಕೊಳ್ಳಲು ಡಯಟ್ ಮಾಡುವವರು ಮೊಟ್ಟೆ ಸೇವಿಸಿದರೆ ಉತ್ತಮ ಎನ್ನಲಾಗುತ್ತದೆ. ಆದರೆ ಎಷ್ಟು ಮೊಟ್ಟೆ ಸೇವಿಸಬೇಕು?
 

ಮೊಟ್ಟೆ ಒಂದು ಪರಿಪೂರ್ಣ ಆಹಾರ. ಇದರಲ್ಲಿ ಹಲವು ಬಗೆಯ, ದೇಹಕ್ಕೆ ಬೇಕಾಗುವ ಪೋಷಕಾಂಶಗಳಿವೆ. ಮೊಟ್ಟೆ ಸೇವನೆಯಿಂದ ಬೇಗನೇ ಹಸಿವಾಗುವುದಿಲ್ಲ. ಹಾಗೇ ಬೇಡದ ಆಹಾರಗಳನ್ನು ಸೇವಿಸುವ ನಾಲಿಗೆ ಚಪಲಕ್ಕೂ ಕತ್ತರಿ ಬೀಳುತ್ತದೆ.

ಕೆಲವರು ಬೆಳಿಗ್ಗೆ ಉಪಾಹಾರಕ್ಕೆ 6 ರಿಂದ 10 ಮೊಟ್ಟೆ ಸೇವಿಸುವವರೂ ಇದ್ದಾರೆ. ಆದರೆ ಇದು ತಪ್ಪು ಎನ್ನುತ್ತಾರೆ ತಜ್ಞರು. ಮೊಟ್ಟೆ ಕೊಂಚ ಉಷ್ಣ ಗುಣವನ್ನೂ ಹೊಂದಿದೆ. ಹಾಗಾಗಿ ಈ ಬೇಸಿಗೆ ಕಾಲದಲ್ಲಿ ಹೆಚ್ಚು ಮೊಟ್ಟೆ ಸೇವಿಸುವುದರಿಂದ ಹೀಟ್ ಆಗುವ ಅಪಾಯವಿದೆ. ದಿನಕ್ಕೆ  ಎರಡು ಅಥವಾ ಮೂರು ಬೇಯಿಸಿದ ಮೊಟ್ಟೆ ಸೇವಿಸುವುದು ಉತ್ತಮ ಅಭ್ಯಾಸ ಎನ್ನುವುದು ತಜ್ಞರ ಅಭಿಪ್ರಾಯ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸೆಕ್ಸ್ ನಂತರ ಮಹಿಳೆಯರು ಬೇಸರಕ್ಕೊಳಗಾಗುವುದು ಯಾಕೆ?!