Publish Date: Sun, 25 Feb 2018 (12:53 IST)
Updated Date: Sun, 25 Feb 2018 (12:55 IST)
ಬೆಂಗಳೂರು: ಮೈಸೂರು ರಾಜವಂಶಸ್ಥರ ಹೊಸ ಕುಡಿಗೆ ನಾಮಕರಣ ಸಮಾರಂಭ ಇಂದು ನಡೆದಿದೆ. ರಾಜ ಯದುವೀರ ಮತ್ತು ತ್ರಿಷಿಕಾ ಕುಮಾರಿ ದಂಪತಿ ಪುತ್ರನಿಗೆ ಆದ್ಯವೀರ್ ನರಂಸಿಂಹ ರಾಜ ಒಡೆಯರ್ ಎಂದು ನಾಮಕರಣ ಮಾಡಲಾಗಿದೆ.
ಬೆಂಗಳೂರಿನ ಅರಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಯುವರಾಜನಿಗೆ ಶಾಸ್ತ್ರೋಸ್ತ್ರಕವಾಗಿ ನಾಮಕರಣ ಮಾಡಲಾಗಿದೆ. ರಾಜಮಾತೆ ಪ್ರಮೋದಾ ದೇವಿ ಸೇರಿದಂತೆ ಎರಡೂ ಕುಟುಂಬಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕಳೆದ ಡಿಸೆಂಬರ್ ನಲ್ಲಿ ಯದುವೀರ್ ಮತ್ತು ತ್ರಿಷಿಕಾ ದಂಪತಿಗೆ ಗಂಡು ಮಗು ಜನಿಸಿತ್ತು. ಇದರೊಂದಿಗೆ ಹಲವು ವರ್ಷಗಳ ನಂತರ ಅರಮನೆಯಲ್ಲಿ ಪುತ್ರೋತ್ಸವದ ಸಂಭ್ರಮ ಮನೆ ಮಾಡಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ