Publish Date: Mon, 26 Feb 2018 (08:51 IST)
Updated Date: Mon, 26 Feb 2018 (08:53 IST)
ಬೆಂಗಳೂರು: ತೂಕ ಕಳೆದುಕೊಂಡು ಸ್ಲಿಮ್ ಆಗಿ ಕಾಣಿಸುವ ಆಸೆಯೇ? ಹಾಗಿದ್ದರೆ ಇಂದಿನಿಂದಲೇ ನಿಮ್ಮ ಆಹಾರದಲ್ಲಿ ಈ ಬದಲಾವಣೆಗಳನ್ನು ಮಾಡಿಕೊಳ್ಳಿ.
ಸಕ್ಕರೆ ಬದಲು ಜೇನು ತುಪ್ಪ
ಸಕ್ಕರೆ ಸೈಲಂಟ್ ಕಿಲ್ಲರ್ ಎನ್ನಲಾಗುತ್ತದೆ. ಜೇನು ತುಪ್ಪದಲ್ಲಿ ಆಂಟಿ ಆಕ್ಸಿಡೆಂಟ್, ಹಾಗೂ ಇತರ ಪೋಷಕಾಂಶಗಳು ಸಾಕಷ್ಟಿದ್ದು, ಆರೋಗ್ಯಕ್ಕೆ ಸಕ್ಕರೆಗಿಂತ ಇದುವೇ ಉತ್ತಮ.
ಎಣ್ಣೆ ಬದಲು ದೇಸೀ ತುಪ್ಪ
ಎಷ್ಟೋಜನರಲ್ಲಿ ತುಪ್ಪ ಸೇವಿಸುವುದರಿಂದ ದಪ್ಪಗಾಗುತ್ತೇವೆ ಎಂಬ ತಪ್ಪು ನಂಬಿಕೆಯಿದೆ. ಅಸಲಿಗೆ ತುಪ್ಪದಲ್ಲಿ ಬೇಡದ ಕೊಬ್ಬು ಇಲ್ಲ. ಇದರಿಂದ ಆರೋಗ್ಯಕ್ಕೆ ಒಳ್ಳೆಯದೇ ಆಗುತ್ತದೆ.
ಕುಸುಬಲಕ್ಕಿ
ವೈಟ್ ರೈಸ್ ಬದಲಿಗೆ, ಕುಸುಬಲಕ್ಕಿ ಬಳಸಿ. ವೈಟ್ ರೈಸ್ ನಂತೆ ಇದನ್ನು ಸಂಸ್ಕರಿಸುವುದಿಲ್ಲ. ಹಾಗಾಗಿ ಪೋಷಕಾಂಶಗಳು ಹೇರಳವಾಗಿರುತ್ತದೆ. ಹಾಗೆಯೇ ನಾರಿನಂಶವೂ ಹೆಚ್ಚು.
ಚಿಪ್ಸ್ ಬದಲಿಗೆ ಪಾಪ್ ಕಾರ್ನ್
ಕುರುಕಲು ತಿನ್ನುವ ಅಭ್ಯಾಸ ಎಲ್ಲರಿಗೂ ಇದ್ದೇ ಇರುತ್ತದೆ. ಎಣ್ಣೆಯಲ್ಲಿ ಕರಿದ ಚಿಪ್ಸ್ ಸೇವಿಸುವುದಕ್ಕಿಂತ ಆರೋಗ್ಯಕರ ಪಾಪ್ ಕಾರ್ನ್ ಸೇವಿಸಿ. ಇದರಲ್ಲಿ ಫೈಬರ್ ಅಂಶವಿರುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ