Publish Date: Wed, 20 Apr 2022 (19:08 IST)
Updated Date: Wed, 20 Apr 2022 (19:14 IST)
ಭಾರತ ಕ್ಷೀರ ಉತ್ಪಾದನೆಯಲ್ಲಿ ಜಗತ್ತಿನಲ್ಲೇ ನಂ.1 ಸ್ಥಾನದಲ್ಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಭಾರತದಲ್ಲಿ ವಾರ್ಷಿಕ 8.5 ಲಕ್ಷ ಕೋಟಿ ಮೌಲ್ಯದ ಹಾಲು ಉತ್ಪಾದನೆಯಾಗುತ್ತದೆ. ಇದು ಗೋಧಿ, ಭತ್ತದ ಉತ್ಪಾದನೆಗಿಂತಲೂ ಅಧಿಕವಾಗಿದ್ದು ಸಣ್ಣ ರೈತರು ಡೈರಿ ಕ್ಷೇತ್ರದ ಅತಿ ದೊಡ್ಡ ಫಲಾನುಭವಿಗಳು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಭಾರತವು ವಿಶ್ವದ ಅತಿದೊಡ್ಡ ಹಾಲು ಉತ್ಪಾದಕ ರಾಷ್ಟ್ರವಾಗಿದೆ. ಕೋಟ್ಯಂತರ ರೈತರ ಜೀವನವು ಹಾಲಿನ ಮೇಲೆ ಅವಲಂಬಿತವಾಗಿರುವಾಗ ಭಾರತವು ವಾರ್ಷಿಕವಾಗಿ 8.5 ಲಕ್ಷ ಕೋಟಿ ರೂಪಾಯಿ ಮೌಲ್ಯದ ಹಾಲನ್ನು ಉತ್ಪಾದಿಸುತ್ತದೆ ಎಂದು ಹೇಳಿದರು