ಕೆಎಂಎಫ್ ಹಾಲಿನ ಪಾಕೆಟ್ ಮೇಲೆ ಕನ್ನಡವೇ ಮಾಯವಾಗಿದ್ದು, ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಹಾಲಿನ ಪಾಕೆಟ್ ಮುದ್ರಣ ಮಾಡಲಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಕನ್ನಡಿಗರು ಆಕ್ರೋಶ ಹೊರಹಾಕುತ್ತಿದ್ದಾರೆ.
ಹೌದು, ಕಳೆದ ಕೆಲ ದಿನಗಳಿಂದ ಸರಬರಾಜು ಮಾಡುವ ಹಾಲಿನ ಪಾಕೆಟ್ ಮೇಲೆ ಕನ್ನಡವೇ ಮಾಯವಾಗಿದೆ.ಇದರಿಂದ ಕೆಎಂಎಫ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡಿಗರು ಆಕ್ರೋಶ ಹೊರಹಾಕಿದ್ದಾರೆ. ನಂದಿನಿ ಪ್ರೊಡಕ್ಟ್ ಕರ್ನಾಟಕದ್ದೋ ಅಲ್ವೋ ಅಂತಾ ಪ್ರಶ್ನೆ ಮಾಡಿರೋ ಕನ್ನಡಿಗರು ಕೆಎಂಎಫ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇನ್ನೂ ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿರುವ ಹಾಲಿನ ಪಾಕೆಟ್ ಮುದ್ರಣವನ್ನು ತಕ್ಷಣ ನಿಲ್ಲಿಸಿ ಕನ್ನಡ ಭಾಷೆಯಲ್ಲಿ ಮುದ್ರಣ ಮಾಡುವಂತೆ ಆಗ್ರಹಿಸಿದ್ದಾರೆ. ನಂದಿನಿ ಹಾಲಿನ ಪಾಕೆಟ್ ಮೇಲೆ ಅಂದ್ರೆ ಹಳೆಯ ಪಾಕೆಟ್ ಮೇಲೆ ಈ ಮೊದಲು ಸಂಪೂರ್ಣವಾಗಿ ಕನ್ನಡ ಭಾಷೆಯಲ್ಲಿಯೇ ನಂದಿನ ಮುದ್ರಣವಾಗಿತ್ತು.ಆದರೀಗ ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಮುದ್ರಣವಾಗಿರೋದು ನಾಡಿನ ಜನರಿಗೆ ಆಕ್ರೋಶ ತರಿಸಿದೆ.
ಹಿಜಬ್, ಹಿಂದೂ ಮುಸ್ಲಿಂ ಜಾತಿ ಬೀಜ ಬಿತ್ತಿ ಸಾಮಾಜಿಕ ಶಾಂತಿ ಹದಗೆಡಿಸುವ ಕಾರ್ಯ ನೆಡೆಯುತ್ತಿದೆ. ಇದೆ ಬೆನ್ನಲ್ಲೇ ಇದೀಗ ಹಿಂದಿ ಹೇರಿಕೆ ಹಾಗೂ ಕನ್ನಡ ಮಾಯಾವತ್ತಿದೆ ಎನ್ನುವ ಮಾತುಗಳೂ ಸೋಶಿಯಲ್ ಮೀಡಿಯಾ ಅಲ್ಲಿ ವ್ಯಕ್ತ ವಾಗುತ್ತಿದೆ