Select Your Language

Notifications

webdunia
webdunia
webdunia
webdunia

RSS ವಿರುದ್ಧ ಕಾಂಗ್ರೆಸ್‌ ವಾಗ್ದಾಳಿ

RSS ವಿರುದ್ಧ ಕಾಂಗ್ರೆಸ್‌ ವಾಗ್ದಾಳಿ
bangalore , ಶನಿವಾರ, 9 ಏಪ್ರಿಲ್ 2022 (20:24 IST)
ಸಂವಿಧಾನವು ಭಾರತದ ಅಸ್ತ್ರವಾಗಿದೆ. ಆದರೆ ಅದನ್ನು ಸರಿಯಾಗಿ ಅನುಸರಿಸದಿದ್ದರೆ ಸಂವಿಧಾನಕ್ಕೆ ಅರ್ಥವಿಲ್ಲ. ನಾವು ಸಂವಿಧಾನವನ್ನು ರಕ್ಷಿಸುವ ಬಗ್ಗೆ ಮಾತನಾಡುತ್ತೇವೆ. ಸಂವಿಧಾನವನ್ನು ಹೇಗೆ ಜಾರಿಗೆ ತರಲಾಗುತ್ತದೆ? ಎಲ್ಲಾ ಸಂಸ್ಥೆಗಳು ಆರ್‌ಎಸ್‌ಎಸ್ ವಶದಲ್ಲಿವೆ ಎಂದು ಆರೋಪಿಸಿದರು.
 
ಸಂವಿಧಾನ ಉಳಿಸಲು, ನಾವು ನಮ್ಮ ಸಂಸ್ಥೆಗಳನ್ನು ರಕ್ಷಿಸಬೇಕು. ಆದರೆ ಎಲ್ಲ ಸಂಸ್ಥೆಗಳೂ ಈಗ ಆರ್‌ಎಸ್‌ಎಸ್‌ ಹಿಡಿತದಲ್ಲಿವೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಾಗ್ದಾಳಿ ಮಾಡಿದ್ದಾರೆ.
 
ನಗರದಲ್ಲಿ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ರಾಹುಲ್‌ ಗಾಂಧಿ ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ಅವರು, ಅಧಿಕಾರದ ಆಸೆಗೆ ಬಿದ್ದ ರಾಜಕಾರಣಿಗಳೂ ಇದ್ದಾರೆ. ಅವರು ಪೂರ್ತಿಯಾಗಿ ಅಧಿಕಾರವನ್ನು ಪಡೆಯುವ ಬಗ್ಗೆ ಯೋಚಿಸುತ್ತಾರೆ. ನಾನು ಅಧಿಕಾರದ ಕೇಂದ್ರದಲ್ಲಿ ಹುಟ್ಟಿದ್ದೇನೆ. ಆದರೆ ನನಗೆ ಅದರಲ್ಲಿ ಆಸಕ್ತಿ ಇಲ್ಲ. ಬದಲಿಗೆ ನಾನು ದೇಶವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತೇನೆ ಎಂದಿದ್ದಾರೆ.  
 
ಮಾಯಾವತಿ ಅವರು ಉತ್ತರ ಪ್ರದೇಶ ಚುನಾವಣೆಯಲ್ಲಿ ಹೋರಾಡಲಿಲ್ಲ. ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಲು ನಾವು ಮಾಯಾವತಿ ಕೇಳಿದ್ದೆವು. ಆದರೆ ಅವರು ಸ್ಪಂದಿಸಲಿಲ್ಲ. ಉತ್ತರ ಪ್ರದೇಶದಲ್ಲಿ ದಲಿತರ ಏಳಿಗೆಗಾಗಿ ಕಾನ್ಸಿರಾಮ್‌ ಜಿ ಅವರು ಧ್ವನಿ ಎತ್ತಿದ್ದರು. ಆದರೆ ಅದು ಕಾಂಗ್ರೆಸ್‌ ಮೇಲೆ ಪರಿಣಾಮ ಬೀರಿತ್ತು. ಈಗ ಮಾಯಾವತಿಯವರು ದಲಿತರ ಧ್ವನಿಯಾಗಿ ಹೋರಾಡಲಿಲ್ಲ. ಏಕೆಂದರೆ ಸಿಬಿಐ, ಇಡಿ, ಪೆಗಾಸಸ್‌ ಭಯದಲ್ಲಿದ್ದಾರೆ ಎಂದು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿವಾದದಿಂದ ಅತಂತ್ರರಾದ ಮುಸ್ಲಿಂ ವ್ಯಾಪಾರಿಗಳು