Publish Date: Mon, 04 Apr 2022 (17:52 IST)
Updated Date: Mon, 04 Apr 2022 (17:55 IST)
ರಾಜ್ಯದ ಮಸೀದಿಗಳಲ್ಲಿ ಆಜಾನ್ ನಿಷೇಧಕ್ಕೆ ಆಗ್ರಹಿಸುತ್ತಿರುವ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ, ಇಷ್ಟು ದಿನ ಇಲ್ಲದ ಆಜಾನ್ ವಿಚಾರ ಈಗ ಏಕೆ ಬಂದಿದೆ? ಇದೇ ರೀತಿ ಮಾಡ್ತಾ ಹೋದರೆ ಬಿಜೆಪಿ ಸರ್ವನಾಶವಾಗುತ್ತೆ. ಇದು ಉತ್ತರ ಪ್ರದೇಶವಲ್ಲ, ಕರ್ನಾಟಕ. ರಾಜ್ಯದಲ್ಲಿ ಸಾಮರಸ್ಯ ಮೂಡಿಸುವ ಕೆಲಸ ಮಾಡಿ. ಡಾ.ಮನಮೋಹನ್ ಸಿಂಗ್ರನ್ನು ಮೌನಿ ಸಿಂಗ್ ಎನ್ನುತ್ತಿದ್ದರು. ಇದೀಗ ಸಿಎಂ ಬಸವರಾಜ ಬೊಮ್ಮಾಯಿ ಮೌನಿ ಆಗಿದ್ದಾರೆ. ಹಿಜಾಬ್ ವಿಚಾರ ಸರ್ಕಾರ ನಿಯಂತ್ರಿಸಿದ್ದರೆ ಬೆಳೆಯುತ್ತಿರಲಿಲ್ಲ ಎಂದು ಹೇಳಿದರು.ರಾಜ್ಯ ಬಿಜೆಪಿ ಸರ್ಕಾರ ಸ್ವತಂತ್ರವಾಗಿ ನಡೆಯುತ್ತಿಲ್ಲ. ರಾಜ್ಯದಲ್ಲಿರುವುದು ರಿಮೋಟ್ ಸರ್ಕಾರ. RSS ಮೆಚ್ಚಿಸುವುದಕ್ಕೆ ನಡೆಸುತ್ತಿರುವ ಸರ್ಕಾರವಾಗಿದೆ ಎಂದು ಹೇಳಿಕೆ ನೀಡಿದ್ದಾರೆ