Select Your Language

Notifications

webdunia
webdunia
webdunia
webdunia

ಹಾಲು ನೀಡಲು ತಡ ಮಾಡಿದ್ದಕ್ಕೆ ಹೀಗೆ ಮಾಡೋದ!?

ಹಾಲು ನೀಡಲು ತಡ ಮಾಡಿದ್ದಕ್ಕೆ ಹೀಗೆ ಮಾಡೋದ!?
ಅಹಮದಾಬಾದ್ , ಭಾನುವಾರ, 20 ಫೆಬ್ರವರಿ 2022 (13:45 IST)
ಗಾಂಧಿನಗರ : ಮಹಿಳೆಯೊಬ್ಬರು ಹಾಲು ನೀಡಲು ತಡ ಮಾಡಿದ್ದಕ್ಕೆ ಪತಿರಾಯ ತ್ರಿವಳಿ ತಲಾಖ್ ನೀಡಿರುವ ಘಟನೆ ಅಹಮದಾಬಾದ್ನಲ್ಲಿ ನಡೆದಿದೆ. ಮಹಿಳೆ ಪತಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
ಮಹಿಳೆ ತನ್ನ ಪತಿ ಹಾಗೂ ಅತ್ತೆ ವರದಕ್ಷಿಣೆಗಾಗಿ ಮಾನಸಿಕ ಕಿರುಕುಳ ಹಾಗೂ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ತನ್ನ ಅತ್ತೆ, ಮಾವ ಹಾಗೂ ಪತಿ ತನ್ನ ಪೋಷಕರಿಂದ 1 ಲಕ್ಷ ರೂ. ಪಡೆಯುವಂತೆ ಕೇಳಿದ್ದರು. ಇದಕ್ಕೆ ನಾನು ನಿರಾಕರಿಸಿದ್ದರಿಂದ ಜಗಳ ಪ್ರಾರಂಭವಾಗಿದೆ.

ಮಂಗಳವಾರ ತನ್ನ 5 ವರ್ಷದ ಮಗಳು ಹಾಲು ಹಾಗೂ ತಿಂಡಿ ಕೇಳಿದ್ದಳು. ಅದೇ ಸಮಯದಲ್ಲಿ ಪತಿಯೂ ನನಗೆ ಹಾಲು ನೀಡುವಂತೆ ಕೇಳಿದ್ದಾನೆ. ಆದರೆ ಮಹಿಳೆ ಮೊದಲು ಮಗುವಿಗೆ ಹಾಲು ನೀಡಿ ಬಳಿಕ ಪತಿಗೆ ಹಾಲನ್ನು ನೀಡಿದ್ದಾರೆ.

ತಡವಾಗಿ ಹಾಲು ನೀಡಿದ್ದಕ್ಕೆ ಕೆರಳಿದ್ದ ಪತಿ ತನ್ನ ಸಂಬಂಧಿಕರು ಹಾಗೂ ಪೋಷಕರ ಸಮ್ಮುಖದಲ್ಲಿ ಆಕೆಗೆ ತ್ರಿವಳಿ ತಲಾಖ್ ನೀಡಿದ್ದಾನೆ.


Share this Story:

Follow Webdunia kannada

ಮುಂದಿನ ಸುದ್ದಿ

ದಾಳಿ ಖಚಿತ ಎಂದ ಜೋ ಬೈಡನ್!