ಗುಜರಾತ್ : ಹಾಲು ಉತ್ಪಾದನೆಯಲ್ಲಿ ಭಾರತ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದ್ದು, ವಾರ್ಷಿಕ 8.5 ಲಕ್ಷ ಕೋಟಿ ರು. ಮೌಲ್ಯದ ಹಾಲು ಉತ್ಪಾದಿಸುತ್ತದೆ.
ಇದು ಗೋಧಿ ಹಾಗೂ ಅಕ್ಕಿಯ ವಾರ್ಷಿಕ ವಹಿವಾಟಿಗಿಂತ ಹೆಚ್ಚು. ಕ್ಷೀರೋತ್ಪಾದನೆಯಿಂದ ಸಣ್ಣ ರೈತರು ಅತಿ ಹೆಚ್ಚು ಫಲ ಪಡೆದಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಇದೇ ವೇಳೆ, ಈ ಹಿಂದಿನ ಕಾಂಗ್ರೆಸ್ ಸರ್ಕಾರಗಳನ್ನೂ ತರಾಟೆಗೆ ತೆಗೆದುಕೊಂಡ ಅವರು, ಹಿಂದಿನ ಸರ್ಕಾರಗಳಲ್ಲಿ ಫಲಾನುಭವಿಗಳಿಗೆ 1 ರುಪಾಯಿಯಲ್ಲಿ ಕೇವಲ 15 ಪೈಸೆ ಸಂದಾಯ ಆಗುತ್ತಿತ್ತು. ಆದರೆ ನಮ್ಮ ಸರ್ಕಾರ ಬಂದ ನಂತರ ಸಂಪೂರ್ಣ 100 ಪೈಸೆ ಹಣ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಸಂದಾಯ ಆಗುವಂತೆ ನೋಡಿಕೊಳ್ಳಲಾಗುತ್ತಿದೆ. ರೈತರ ಖಾತೆಗೆ ವಾರ್ಷಿಕ 6000 ರು. ನೀಡುತ್ತಿದ್ದೇವೆ ಎಂದು ತಿಳಿಸಿದರು.
ಭಾರತ ವಾರ್ಷಿಕ 8.5 ಲಕ್ಷ ಕೋಟಿ ರು. ಮೌಲ್ಯದ ಹಾಲು ಉತ್ಪಾದಿಸುತ್ತಿದ್ದು, ವಿಶ್ವದ ಅತಿದೊಡ್ಡ ಕ್ಷೀರೋತ್ಪಾದಕ ದೇಶವಾಗಿ ಹೊರಹೊಮ್ಮಿದೆ. ಗೋಧಿ ಹಾಗೂ ಅಕ್ಕಿಯ ವಾರ್ಷಿಕ ವಹಿವಾಟೇ 8.5 ಲಕ್ಷ ಕೋಟಿ ರು. ಇಲ್ಲ. ಹೀಗಾಗಿ ಹೈನೋದ್ಯಮ ಭಾರೀ ಅನುಕೂಲ ಸೃಷ್ಟಿಸಿದೆ ಎಂದರು.