Daily Horoscope

Select Your Language

Notifications

webdunia
webdunia
webdunia
webdunia

ಸ್ವಾತಂತ್ರ್ಯ ದಿನ : ಟ್ವೀಟ್‌ನಲ್ಲಿ ಜನತೆಗೆ ಗಣ್ಯರ ಶುಭಾಶಯ

ಸ್ವಾತಂತ್ರ್ಯ ದಿನ
ಬೆಂಗಳೂರು : ಭಾರತ ಇಂದು 77ನೇ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿದೆ. ಈ ಶುಭದಿನದಲ್ಲಿ ರಾಜಕೀಯ ಗಣ್ಯರಾದ ನರೇಂದ್ರ ಮೋದಿ, ರಾಹುಲ್ ಗಾಂಧಿ, ಸಿದ್ದರಾಮಯ್ಯ ಸೇರಿದಂತೆ ಅನೇಕರು ಟ್ವಿಟ್ಟರ್ನಲ್ಲಿ ಶುಭಹಾರೈಸಿದ್ದಾರೆ.

77ನೇ ಸ್ವಾತಂತ್ರ್ಯ ದಿನದ ಹಿನ್ನೆಲೆ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಜನತೆಗೆ ಸ್ವಾತಂತ್ರ್ಯ ದಿನಾಚರಣೆಗೆ ಶುಭಾಶಯಗಳು. ನಮ್ಮ ಮಹಾನ್ ಸ್ವಾತಂತ್ರ್ಯ ಹೋರಾಟಗಾರರಿಗೆ ನಾವು ಗೌರವ ಸಲ್ಲಿಸುತ್ತೇವೆ. ಅವರ ಕನಸನ್ನು ಈಡೇರಿಸುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತೇವೆ. ಜೈ ಹಿಂದ್ ಎಂದು ಬರೆದುಕೊಂಡಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. ದೇಶದ ಸ್ವಾತಂತ್ರ್ಯಕ್ಕೆ ಕಾರಣರಾದ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರಿಗೆ ನಾನು ನಮಸ್ಕರಿಸುತ್ತೇನೆ. ಈ ದಿನ ಸ್ವಾತಂತ್ರ್ಯಕ್ಕಾಗಿ ತಮ್ಮನ್ನು ತಾವು ಮುಡಿಪಾಗಿರಿಸಿದ ಅಮರ ತ್ಯಾಗಿಗಳು ಕನಸು ಕಂಡ ಸುವರ್ಣ ಭಾರತವನ್ನು ನಿರ್ಮಿಸುವ ನಮ್ಮ ಕರ್ತವ್ಯಗಳನ್ನು ನೆನಪಿಸುತ್ತದೆ. ಬನ್ನಿ, ಸ್ವಾತಂತ್ರ್ಯದ ಸುವರ್ಣ ಯುಗದಲ್ಲಿ ರಾಷ್ಟ್ರದ ಐಕ್ಯತೆ ಮತ್ತು ಸಮೃದ್ಧಿಗೆ ನಮ್ಮ ಕೈಲಾದ ಕೊಡುಗೆ ನೀಡುವ ಪ್ರತಿಜ್ಞೆಯನ್ನು ಮಾಡೋಣ ಎಂದು ಕರೆ ನೀಡಿದ್ದಾರೆ.

ಸ್ವಾತಂತ್ರ್ಯ ದಿನದ ಹಿನ್ನೆಲೆ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತ ಮಾತೆ ಪ್ರತಿಯೊಬ್ಬ ಭಾರತೀಯನ ಧ್ವನಿ. ಪ್ರತಿಯೊಬ್ಬ ದೇಶದ ನಾಗರಿಕನಿಗೂ ಸ್ವಾತಂತ್ರ್ಯ ದಿನದ ಹಾರ್ದಿಕ ಶುಭಾಶಯಗಳು ಎಂದು ತಿಳಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

10 ನೇ ಬಾರಿಗೆ ಧ್ವಜಾರೋಹಣ ಮಾಡಿ ದಾಖಲೆ ಮಾಡಿದ ಪ್ರಧಾನಿ ಮೋದಿ