Publish Date: Sun, 13 Aug 2023 (17:24 IST)
Updated Date: Sun, 13 Aug 2023 (16:29 IST)
76ನೇ ಸ್ವಾತಂತ್ರ್ಯ ದಿನಾಚರಣೆಗೆ ಇನ್ನ ಕೇವಲ 4 ದಿನ ಮಾತ್ರ ಬಾಕಿ ಇದೆ. ಆದ್ದರಿಂದ ಕೆಲವು ಖಾಸಗಿ ಕಂಪನಿಗಳು, ಸರ್ಕಾರಿ ಕಟ್ಟಡಗಳ ಮೇಲೆ ಈಗಾಗಲೇ ತ್ರಿವರ್ಣ ಧ್ವಜ ಹಾರಾಡುತ್ತಿದೆ. ಇಷ್ಟು ದಿನ ಸರ್ಕಾರಿ ಕಟ್ಟಡಗಳ ಮೇಲೆ ಮಾತ್ರ ತ್ರಿವರ್ಣ ಧ್ವಜ ಮತ್ತ ದೀಪಾಲಂಕಾರ ಕಂಡು ಬರುತ್ತಿತ್ತು. ಆದ್ರೆ ಈಗ ಸಿಲಿಕಾನ್ ಸಿಟಿಯಲ್ಲಿ ಬಹುತೇಕ ಕಡೆ ಕೇಸರಿ, ಬಿಳಿ, ಹಸಿರಿನ ದೀಪಗಳು ಕಂಗೊಳಿಸುತ್ತಿದೆ. ಬಹುಮಹಡಿ ಕಟ್ಟಡಗಳ ಮೇಲೆ ತ್ರಿವರ್ಣ ಧ್ವಜದ ದೀಪಾಲಂಕಾರಗಳನ್ನ ಹಾಕಿರುವ ಕಾರಣ ಸಂಜೆ ವೇಳೆ ನೋಡುಗರ ಮನ ಸೆಳೆಯುತ್ತಿವೆ.