Select Your Language

Notifications

webdunia
webdunia
webdunia
webdunia

ಅಮೃತ ಸರೋವರ ದಂಡೆಯಲ್ಲಿ ಹಾರಾಡುತ್ತಿರುವ ತ್ರಿವರ್ಣ ಧ್ವಜ

ಅಮೃತ ಸರೋವರ ದಂಡೆಯಲ್ಲಿ ಹಾರಾಡುತ್ತಿರುವ ತ್ರಿವರ್ಣ ಧ್ವಜ
ಚಿಕ್ಕನಾಯಕನಹಳ್ಳಿ , ಶುಕ್ರವಾರ, 27 ಜನವರಿ 2023 (11:21 IST)
ಚಿಕ್ಕನಾಯಕನಹಳ್ಳಿ : ಗ್ರಾಮೀಣ ಜನರ ಜೀವನ ಹಾಗೂ ಸುತ್ತಲಿನ ಪರಿಸರ ಸುವ್ಯವಸ್ಥಿತವಾಗಿ ನಡೆಯಬೇಕು. ಈ ಅಮೃತ ಸರೋವರ ಕಾಮಗಾರಿಯಿಂದ ಗ್ರಾಮದಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿದೆ. ಸರ್ಕಾರದ ಇಂತಹ ಯೋಜನೆಗಳು ಶ್ಲಾಘನೀಯ ಎಂದು ಸಹಾಯಕ ನಿರ್ದೇಶಕರಾದ ಸುರೇಶ್ (ಗ್ರಾ,ಉ) ಸಾರ್ವಜನಿಕಎನ್ನುದ್ದೇಶಿಸಿ ಮಾತನಾಡಿದರು.

ಗುರುವಾರ 74 ನೇ ಗಣರಾಜ್ಯೋತ್ಸವದ ಅಂಗವಾಗಿ ದುಗುಡಿಹಳ್ಳಿ ಗ್ರಾಮ ಪಂಚಾಯಿತಿ ಅಮೃತ ಸರೋವರ ಕೆರೆ ದಂಡೆಯಲ್ಲಿ ಮಾಜಿ ಸೈನಿಕರಾದ ಸಿದ್ದರಾಮಣ್ಣ ಅವರಿಂದ ಧ್ವಜಾರೋಹಣ ನೆರೆವೇರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ನಮ್ಮ ಗ್ರಾಮದಲ್ಲಿ ನರೇಗಾ ಯೋಜನೆಯಡಿ ಅಮೃತ ಸರೋವರ ಕೆರೆಯನ್ನು ನಿರ್ಮಿಸಿರುವುದು ಸಂತಸದ ವಿಚಾರ. ಪಾಳು ಬಿದ್ದ ಕೆರೆಗೆ ಜೀವಕಳೆ ತುಂಬಿದೆ. ಪ್ರಸ್ತುತ ನಮ್ಮ ಗ್ರಾಮದ ಜನರು ನಿಶ್ಚಿಂತೆಯಿಂದ ವ್ಯವಸಾಯದಲ್ಲಿ ತೊಡಗಲು ಅನುಕೂಲವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಸರ್ಕಾರದ ಈ ಯೋಜನೆಯ ಉದ್ದೇಶವೇನು? ಅಷ್ಟೇ ಅಲ್ಲದೇ ಗ್ರಾಮ ಪಂಚಾಯಿತಿಗಳ ಮಟ್ಟದಲ್ಲಿ ಕೆರೆಗಳನ್ನು ಅಭಿವೃದ್ಧಿ ಪಡಿಸುವ ಅಂಶಗಳನ್ನು ಅಧಿಕಾರಿಗಳುÀ ಸಾರ್ವಜನಿಕರಿಗೆ ಮನವರಿಗೆ ಮಾಡಿಸಲಾಯಿತು.

ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತ್ ಸಹಾಯಕರಾದ ಸುರೇಶ್ (ಗ್ರಾ,ಉ) ಅವರು, ಮಾಜಿ ಸೈನಿಕರಾದ ಸಿದ್ದರಾಮಣ್ಣ, ಅಭಿವೃದ್ಧಿ ಅಧಿಕಾರಿಯಾದ ರಮೇಶ್, ಪಂಚಾಯಿತಿಯ ಅಧ್ಯಕ್ಷರು, ಸದಸ್ಯರು, ಐಇಸಿ ಸಂಯೋಜಕರಾದ ರಮ್ಯ ಕೆ.ಎಸ್, ವಿಷಯ ನಿರ್ವಾಹಕರಾದ ಉಮೇಶ್ (ನರೇಗಾ), ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ಪಂಚಾಯಿತಿ ಸಿಬ್ಬಂದಿಗಳು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


Share this Story:

Follow Webdunia kannada

ಮುಂದಿನ ಸುದ್ದಿ

ಜಿಎಸ್ಟಿ ಹೆಸರಲ್ಲಿ 9.60 ಕೋಟಿ ವಂಚನೆ