Select Your Language

Notifications

webdunia
webdunia
webdunia
webdunia

10 ನೇ ಬಾರಿಗೆ ಧ್ವಜಾರೋಹಣ ಮಾಡಿ ದಾಖಲೆ ಮಾಡಿದ ಪ್ರಧಾನಿ ಮೋದಿ

ಪ್ರಧಾನಿ ಮೋದಿ
Photo Courtesy: Twitter
ನವದೆಹಲಿ: 77 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಇಂದು ಪ್ರಧಾನಿ ಮೋದಿ ದೆಹಲಿಯ ಕೆಂಪು ಕೋಟೆಯಲ್ಲಿ ಧ‍್ವಜಾರೋಹಣ ನೆರವೇರಿಸಿದ್ದಾರೆ. ಇದು 10 ನೇ ಬಾರಿಗೆ ಅವರು ಧ್ವಜಾರೋಹಣ ಮಾಡಿದ್ದಾರೆ ಎನ್ನುವುದು ವಿಶೇಷ.

ಇದಕ್ಕೆ ಮೊದಲು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸತತ 10 ಬಾರಿ ಧ‍್ವಜಾರೋಹಣ ಮಾಡಿ ದಾಖಲೆ ಮಾಡಿದ್ದರು. ಇದೀಗ ಮನಮೋಹನ್ ಸಿಂಗ್ ಸಾಲಿಗೆ ಪ್ರಧಾನಿ ಮೋದಿ ಕೂಡಾ ಸೇರಿಕೊಂಡಿದ್ದಾರೆ.

ಇದುವರೆಗೆ ಭಾರತ 15 ಪ್ರಧಾನ ಮಂತ್ರಿಗಳನ್ನು ಕಂಡಿದೆ. ಆ ಪೈಕಿ 13 ಪ್ರಧಾನಿಗಳು ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡುವ ಅವಕಾಶ ಪಡೆದಿದ್ದರು. ಮಾಜಿ ಪ್ರಧಾನಿಗಳಾದ ಗುಲ್ಝಾರಿಲಾಲ್ ನಂದ ಮತ್ತು ಚಂದ್ರಶೇಖರ್ ಧ್ವಜಾರೋಹಣ ಮಾಡಿರಲಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ವಾತಂತ್ರ್ಯೋತ್ಸವ : ಮೋದಿ ಭಾಷಣ ಕೇಳಲಿದ್ದಾರೆ 1800 ವಿಶೇಷ ಆಹ್ವಾನಿತರು